ಉಡುಪಿ: ಸ್ಕೂಟರ್ ಖರೀದಿ ನೆಪದಲ್ಲಿ ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ರಾಜೇಶ್ ಅಮೀನ್ ಅವರು ಸ್ಕೂಟರ್ ಖರೀದಿಸುವ ಬಗ್ಗೆ ಆನ್‌ಲೈನ್‌ನಲ್ಲಿ ಅದರಲ್ಲಿ ಬಂದ ವೆಬ್‌ಸೈಟ್‌ನಲ್ಲಿ ಕಂಡು ಬಂದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಾಗ ಆತ ಮುಂಗಡ ಹಣ ಪಾವತಿಸುವಂತೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿದ್ದ. ಇದನ್ನು ನಂಬಿದ ಅವರು ಹಂತ-ಹಂತವಾಗಿ ಒಟ್ಟು 69,439 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆತ ಪಡೆದ ಹಣವನ್ನು ಹಿಂದಿರುಗಿಸದೆ ಇತ್ತ ಸ್ಕೂಟರನ್ನು ನೀಡದೆ ವಂಚಿಸಿದ್ದಾನೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement