Advertisement

ಚಿನ್ನಾಭರಣಗಳಿಗೆ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ; ಆರೋಪಿ ಬಂಧನ

11:42 AM Dec 19, 2020 | Mithun PG |

ಹುಬ್ಬಳ್ಳಿ: ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಹಾಕಿ, ಪಾಲಿಷ್ ಮಾಡಿಕೊಡುವುದಾಗಿ ನಂಬಿಸಿ ಮೋಸಮಾಡುತ್ತಿದ್ದ ವಂಚಕನೊಬ್ಬನನ್ನು, ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಸುನಿಲ ಪತ್ತಾರ ಬಂಧಿತ ಆರೋಪಿ. ಆತನಿಂದ 20 ಲಕ್ಷ ರೂ. ಮೌಲ್ಯದ 330 ಗ್ರಾಂ ಚಿನ್ನಾಭರಣ ಹಾಗೂ 3.56 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ವಂಚಕನ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ, ದಾಳಿ ನಡೆಸಿ ಚಿನ್ನಾಭರಣ ಸಮೇತ ಸುನಿಲನನ್ನು ಬಂಧಿಸಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಐಸಿಎಂಆರ್ ಮುಖ್ಯಸ್ಥ ಬಲರಾಮ್ ಗೆ ಕೋವಿಡ್ 19 ಸೋಂಕು ದೃಢ, ಏಮ್ಸ್ ಗೆ ದಾಖಲು

ವೈದ್ಯರ ಮೇಲೆ ಹಲ್ಲೆ

Advertisement

ಮಾಸ್ಕ್ ಧರಿಸದ್ದರಿಂದ ಕೋವಿಡ್ ಪರೀಕ್ಷೆಗೆ ಮುಂದಾದ ವೈದ್ಯರ ಮೇಲೆ ಮೂವರು ಮಹಿಳೆಯರು ಹಲ್ಲೆ ಮಾಡಿದ ಘಟನೆ, ಶುಕ್ರವಾರ (ಡಿ.18) ಸಂಜೆ ಹುಬ್ಬಳ್ಳಿಯ  ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಾಸ್ಕ್ ಹಾಕಿಕೊಳ್ಳದಿದ್ದ ಮಹಿಳೆಗೆ ವೈದ್ಯರು ಕೋವಿಡ್ ತಪಾಸಣೆ ಮಾಡಲು ಹೋದಾಗ ನಿರಾಕರಿಸಿದ್ದಾರೆ ಮತ್ತು ತಮ್ಮ ಮೊಬೈಲ್ ನಂಬರ್ ನೀಡಲು ಹಿಂದೇಟು ಹಾಕಿ, ವೈದ್ಯೆ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಉಪನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  ಸೆಸ್ ಹೆಚ್ಚಳ ವಿರೋಧಿಸಿ ಡಿ. 21ರಂದು ರಾಜ್ಯಾದ್ಯಾಂತ ಎಪಿಎಂಸಿ ಬಂದ್

Advertisement

Udayavani is now on Telegram. Click here to join our channel and stay updated with the latest news.

Next