Advertisement

ATM ನಿಂದ ಹಣ ಡ್ರಾ ಮಾಡಿಕೊಡುವುದಾಗಿ ವಂಚನೆ: ಮಹಿಳೆ ಬಂಧನ

09:12 PM Nov 12, 2023 | Team Udayavani |

ಮುಂಡಗೋಡ: ಎಟಿಎಮ್ ನಿಂದ ಹಣ ಡ್ರಾ ಮಾಡಿಕೊಡುವುದಾಗಿ ಹೇಳೆ ಮಹಿಳೆಗೆ ವಂಚಿಸಿದ ವಂಚಕಿಯನ್ನು ರವಿವಾರ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಮೂಲದ ಸದ್ಯ ಶಿರಸಿಯಲ್ಲಿರುವ ಕೌಸರಾಬಾನು ಹಿರೇಕೆರೂರ(35) ಬಂಧಿತೆ. ಸೆ.25 ರಂದು ತಾಲೂಕಿನ ಮೈನಳ್ಳಿ ಗ್ರಾಮದ ಸಕೀನಾಬಿ ಸಲೀಂ ಎಂಬ ಮಹಿಳೆ ಪಟ್ಟಣದ ಕೆನರಾ ಬ್ಯಾಂಕಿನ ಎಟಿಎಮ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು.  ಈ ವೇಳೆ ಆರೋಪಿ ಕೌಸರಾ ಬಾನು ಹಣ ತೆಗೆದುಕೊಡುವುದಾಗಿ ಹೇಳಿ ಸಕೀನಾಬಿ ಅವರಿಗೆ ನಂಬಿಸಿ ಎಟಿಎಮ್ ಪಾಸ್‌ವರ್ಡನ್ನು ನೋಡಿಕೊಂಡು ಎಟಿಎಮ್ ಬದಲಿಸಿ  ಬೇರೆ ಹೆಸಲಿನಲ್ಲಿರುವ ಎಟಿಎಮ್ ಕಾಡ್ ಕೊಟ್ಟು ಸಕೀನಾಬಿ ಅವರ ಖಾತೆಯಿಂದ69 ಸಾವಿರ ರೂ ಹಣವನ್ನು ತೆಗೆದು  ವಂಚನೆ ಮಾಡಿದ್ದರ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವಂಚನೆ ಪ್ರಕರಣವನ್ನು ಭೇದಿಸಲು ಸಿಪಿಐ ಬಿ.ಎಸ್ ಲೋಕಾಪುರ ನೇತೃತ್ವದ ವಿಶೇಷ ತಂಡವನ್ನು ರಚಿಸಿದ್ದರು. ರವಿವಾರ ವಂಚಕಿ ಕೌಸರಾಬಾನು ಅವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು ಆರೋಪಿತಳಿಂದ 12 ಸಾವಿರ ರೂ.ವಶಪಡೆದಿದ್ದಾರೆ.

ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಡಾ| ವಿಷ್ಣುವರ್ಧನ್, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್. ಜಯಕುಮಾರ, ಶಿರಸಿಯ ಡಿಎಸ್‌ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಬಿ ಎಸ್ ಲೋಕಾಪುರ ನೇತೃತ್ವದ ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರು, ಹನಮಂತ ಕುಡಗುಂಟಿ, ಎಎಸ್‌ಐ ಗೀತಾ ಕಲಘಟಗಿ, ಸಿಬ್ಬಂದಿಗಳಾದ ಮಹಮ್ಮದ್ ಸಲೀಮ್, ಕೊಟೇಶ ನಾಗರವಳ್ಳಿ, ಬಸವರಾಜ ಲಮಾಣಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಬಸವರಾಜ ಒಡೆಯರ್, ಪುಷ್ಪಾ ಕೂಳಗಿ, ರೇಖಾ ಹುಚ್ಚಣ್ಣವರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next