ಉಡುಪಿ: ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ವಿಜೇತರಾಗಿದ್ದೀರಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ಸಾವಿರಾರು ರೂ. ವಂಚಿಸಿರುವ ಪ್ರಕರಣ ಶನಿವಾರ ವರದಿಯಾಗಿದೆ.
Advertisement
ಸದೀಚ್ಚಾ ಪರೇಶ್ ಕಾಮತ್ ಅವರಿಗೆ ಯಾರೋ ಕರೆ ಮಾಡಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದರು. ಗಿಫ್ಟ್ ಕಳುಹಿಸಲು ಬ್ಯಾಂಕ್ ಖಾತೆ ನೀಡಿ ಇದಕ್ಕೆ ಹಣ ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ಒಟ್ಟು 33,998 ರೂ. ಪಾವತಿಸಿ, ಗಿಫ್ಟ್ ಹಾಗೂ ಹಣ ಹಿಂದೆ ಕೊಡದೇ ವಂಚಿಸಿದ್ದಾರೆ.
ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರವಾಸಿ ಕೇಂದ್ರವಾಗಿ ರಾಮಸಮುದ್ರ ಅಭಿವೃದ್ಧಿ: ಸಚಿವ ಸುನಿಲ್