ಮಂಗಳೂರು: ಆಡಿನ ಫಾರ್ಮ್ ಮಾಡುವುದಾಗಿ ನಂಬಿಸಿ ಇಬ್ಬರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಫೆಡ್ರಿಕ್ ಫೆರಾವೋ ಹಾಗೂ ಅವರ ಸ್ನೇಹಿತ ವಿಜಯ್ ಬಜೊìಜ ಅವರು ಹಂಪನಕಟ್ಟೆಯಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಅವರ ಅಂಗಡಿಗೆ ಬೆನ್ನಿಚಾನ್ ಜೋಸೆಫ್ ಅವರು ಉಪ್ಪಿನಕಾಯಿ ಮಸಾಲ ಪೌಡರ್‌ಗಳನ್ನು ಪೂರೈಸುತ್ತಿದ್ದರು. ತಾನು ದಾವಣಗೆರೆಯಲ್ಲಿ ಆಡು ಫಾರ್ಮ್ ಸಾಕಾಣಿಕೆ ಮಾಡಿಕೊಂಡಿದ್ದು, ಉತ್ತಮ ಲಾಭ ಗಳಿಸುತ್ತಿದ್ದೇನೆ ಎಂದು ಹೇಳಿ ಫೆಡ್ರಿಕ್ ಮತ್ತು ವಿಜಯ್ ಅವರ ಜಮೀನಿನಲ್ಲಿಯೂ ಆಡಿನ ಫಾರ್ಮ್ ಮಾಡುವುದಾಗಿ ಹೇಳಿ ಒಪ್ಪಂದ ಮಾಡಿಕೊಂಡಿದ್ದರು.
ಅದನ್ನು ನಂಬಿದ ಫೆಡ್ರಿಕ್ ಮತ್ತು ವಿಜಯ್ ಅವರು ಬೆನ್ನಿಚಾನ್ ಜೋಸೆಫ್ ಅವರ ಖಾತೆಗೆ 3 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ ಬೆನ್ನಿಚಾನ್ ಆಡಿನ ಫಾರ್ಮ್ ಮಾಡದೆ ವಂಚಿಸಿದ್ದಾರೆ ಎಂದು ವಂಚಿತರು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ.