Advertisement

ಉದ್ಯೋಗ ನೆಪದಲ್ಲಿ ಚೀನಾ ಆ್ಯಪ್‌ನಿಂದ ದೋಖಾ

03:03 PM Oct 04, 2022 | Team Udayavani |

ಬೆಂಗಳೂರು: ಚೀನಾ ಮೂಲದ ಲೋನ್‌ ಆ್ಯಪ್‌ ಕಂಪನಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು, ಇದೀಗ ಅರೆಕಾಲಿಕ(ಪಾರ್ಟ್‌ಟೈಂ) ಉದ್ಯೋಗ ನೀಡುವುದಾಗಿ “ಕೀಪ್‌ಶೇರ್‌’ ಎಂಬ ಆ್ಯಪ್‌ ಮೂಲಕ ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಗೆ ಸೇರಿದ 12 ಕೇಂದ್ರಗಳ ಮೇಲೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

Advertisement

ಈ ದಾಳಿ ವೇಳೆ ಕೇಂದ್ರಗಳಲ್ಲಿದ್ದ ಅಕ್ರಮ ದಾಖಲೆಗಳು ಹಾಗೂ 5.85 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ. ಇತ್ತೀಚೆಗೆ ಚೀನಾ ಮೂಲದ ಕಂಪ ನಿಯ ವಂಚನೆಗೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಈ ವೇಳೆ ಕಂಪನಿ ಅಕ್ರಮ ಹಣ ವಹಿ ವಾ ಟು ನಡೆಸಿದ ಆರೋಪ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಂಪನಿಯ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದಾರೆ.

ವಂಚಕರು ಚೀನಾ ಮೂಲದ “ಕೀಪ್‌ಶೇರ್‌’ ಎಂಬ ಮೊಬೈಲ್‌ ಆ್ಯಪ್‌ನಲ್ಲಿ ಯುವ ಸಮುದಾಯವನ್ನು ಪಾರ್ಟ್‌ ಟೈಂ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಇಂತಿಷ್ಟು ಹಣ ಪಡೆಯುತ್ತಿದ್ದರು. ಆದರೆ, ಉದ್ಯೋಗ ಕೊಡಿಸದೆ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ವಂಚಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಇಡಿ ತಿಳಿಸಿದೆ. ‌

ಭಾರತೀಯರೇ ನಿರ್ದೇಶಕರು!: ಚೀನಾ ಮೂಲದ ವ್ಯಕ್ತಿಗಳು ಭಾರತದಲ್ಲಿ ಕೆಲವೊಂದು ಕಂಪನಿಗಳು ತೆರೆದಿದ್ದರು. ಅವುಗಳಿಗೆ ಭಾರ ತೀಯ ಮೂಲಕ ನಿರ್ದೇಶಕರು, ಅನುವಾದ ಕರು(ಆಯಾ ಸ್ಥಳೀಯ ಭಾಷೆಯವರಿಗೆ ಮಾಹಿತಿ ನೀಡಲು), ಮಾನವ ಸಂಪನ್ಮೂಲ ವಿಭಾಗ(ಎಚ್‌ಆರ್‌) ವ್ಯವಸ್ಥಾಪಕರು, ಟೆಲಿಕಾಲರ್‌ಗಳು ನೇಮಿಸುತ್ತಿದ್ದರು. ಅಲ್ಲದೆ, ಈ ವ್ಯಕ್ತಿಗಳ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿ ಎಲ್ಲ ದಾಖಲೆಗಳನ್ನು ಪಡೆದುಕೊಂಡು, ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದಾರೆ. ವಿಪರ್ಯಾಸವೆಂದರೆ, ಭಾರತೀಯ ಮೂಲದ ವ್ಯಕ್ತಿಗಳ ಹೆಸರಿನಲ್ಲಿಯೇ ವಂಚಕ ಕೀಪ್‌ಶೇರ್‌ ಆ್ಯಪ್‌ ಗಳನ್ನು ಸಿದ್ಧಪಡಿಸುತ್ತಿದ್ದರು. ಅದನ್ನು ವಾಟ್ಸ್‌ ಆ್ಯಪ್‌, ಟೆಲಿಗ್ರಾಂ ಮೂಲಕ ಪಾರ್ಟ್‌ಟೈಂ ಉದ್ಯೋಗದ ಜಾಹೀರಾತು ನೀಡುತ್ತಿದ್ದರು.

ಮತ್ತೂಂದೆಡೆ ಈ ಆ್ಯಪ್‌ನಲ್ಲಿ ಹೂಡಿಕೆ ಆ್ಯಪ್‌ ಗಳ ಜತೆ ಲಿಂಕ್‌ ಮಾಡಲಾಗಿತ್ತು. ಈ ಆ್ಯಪ್‌ ಡೌನ್‌ಲೋಡ್‌ ಮಾಡಿ ಮಾಹಿತಿ ನೋಂದಾಯಿಸುತ್ತಿದ್ದ ಯುವಕರಿಂದ ಇಂತಿಷ್ಟು ಹಣ ಪಡೆಯಲಾಗುತ್ತಿತ್ತು. ಜತೆಗೆ ಸಾರ್ವಜನಿ ಕರಿಂದಲೂ ಹೂಡಿಕೆ ನೆಪದಲ್ಲಿ ಹಣ ಸಂಗ್ರಹಿಸುತ್ತಿದ್ದರು. ಇನ್ನು ನೋಂದಣಿಯಾದ ಯುವಕರಿಗೆ ಸೆಲೆಬ್ರಿಟಿಗಳ ವಿಡಿಯೋಗಳನ್ನು ಲೈಕ್‌ ಮಾಡಿ, ಸಾರ್ವಜನಿಕ ಜಾಲತಾಣಗಳಲ್ಲಿ ವಿಡಿಯೋ ಗಳನ್ನು ಅಪ್‌ಲೋಡ್‌ ಮಾಡುವಂತ ಟಾಸ್ಕ್ ನೀಡಲಾಗುತ್ತಿತ್ತು.

Advertisement

ಈ ಕೆಲಸ ಮಾಡಿದ ಯುವಕ ರಿಗೆ ಪ್ರತಿ ವಿಡಿಯೋಗೆ 20 ರೂ. ಪಾವತಿಸುತ್ತಿದ್ದರು. ಅದು ಕೀಪ್‌ಶೇರ್‌ ವ್ಯಾಲೆಟ್‌ನಲ್ಲಿ ಜಮೆ ಆಗುತ್ತಿತ್ತು. ಅದಕ್ಕಾಗಿ ಇಂತಿಷ್ಟು ದಿನ ಟಾರ್ಗೆಟ್‌ ಇಟ್ಟುಕೊಂಡಿದ್ದ ವಂಚಕರು, ತಮ್ಮ ಆ್ಯಪ್‌ನ ವ್ಯಾಲೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದ್ದಂತೆ ಪ್ಲೇಸ್ಟೋರ್‌ನಲ್ಲಿ ಆ ಆ್ಯಪ್‌ ತೆಗೆದು ಹಾಕಲಾಗುತ್ತಿತ್ತು. ಈ ಮೂಲಕ ಸಾರ್ವಜನಿಕರು ತಮ್ಮ ಹೂಡಿಕೆಯ ಮೊತ್ತ ಮತ್ತು ಯುವಕರಿಗೆ ಪಾವತಿಸಬೇಕಾದ ಸಂಭಾ ವನೆಯೊಂದಿಗೆ ಕೋಟ್ಯಂತರ ರೂ. ಹಣವನ್ನು ವಂಚಿಸಿ, ಬೆಂಗಳೂರಿನಲ್ಲಿ ತೆರೆಯಲಾಗಿದ್ದ ಕಂಪನಿಗಳ ಬ್ಯಾಂಕ್‌ ಖಾತೆಗಳಿಂದ ವಹಿವಾಟು ಮಾಡಿಕೊಂಡು, ಈ ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿಕೊಂಡು, ಚೀನಾ ಮೂಲದ ಕ್ರಿಪ್ಟೋ ಎಕ್ಸ್‌ಜೇಂಜ್‌ಗಳಿಗೆ ವರ್ಗಾ ವಣೆ ಮಾಡಲಾಗುತ್ತಿತ್ತು. ಈ ಎಲ್ಲ ವಹಿವಾಟು ಗಳನ್ನು ಚೀನಾ ಮೂಲದ ವ್ಯಕ್ತಿಗಳು ಪೋನ್‌ ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳ ನಿಯಂತ್ರಿಸುತ್ತಿದ್ದರು ಎಂದು ಇಡಿ ತಿಳಿಸಿದೆ.

ಆರು ಮಂದಿ ವಿದೇಶಿಯರು : ಮತ್ತೂಂದು ಸ್ಫೋಟಕ ವಿಚಾರವೆಂದರೆ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ 92 ಮಂದಿ ಆರೋಪಿಗಳ ಪೈಕಿ ಆರು ಮಂದಿ ಚೀನಾ ಮತ್ತು ತೈವಾನ್‌ ದೇಶದ ನಾಗರಿಕರಾಗಿದ್ದು, ಎಲ್ಲ ಅವ್ಯವಹಾರ ವನ್ನು ಸಂಪೂರ್ಣವಾಗಿ ನಿಯಂತ್ರಿ ಸುತ್ತಿದ್ದರು ಎಂದು ಇಡಿ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next