Advertisement

ಬಂಧನ ವೇಳೆ ಮಲ್ಯ, ನೀರಜ್‌ ಹೆಸರು ಹೇಳಿದ ವಂಚಕ!

10:00 AM Jan 31, 2023 | Team Udayavani |

ಬೆಂಗಳೂರು: ಖಾಲಿ ನಿವೇಶನಗಳು ಮಾರಾಟ ಕ್ಕೀವೆ ಎಂದು ಜಾಹೀರಾತು ಅಥವಾ ನಾಮಫ‌ಲಕ ಹಾಕುವ ಮುನ್ನ ಎಚ್ಚರವಹಿಸಿ! ನಿವೇಶನ ಖರೀದಿ ಸೋಗಿನಲ್ಲಿ ದಾಖಲೆಗಳನ್ನು ಪಡೆದು, ನಂತರ ಅವುಗಳನ್ನು ನಕಲು ಮಾಡಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚಿಸಿ ಸುಮಾರು 5 ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಯನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಲೋಕೇಶ್‌ (46) ಬಂಧಿತ ಆರೋಪಿ. ಇದೇ ಪ್ರಕ ರಣದಲ್ಲಿ ಈ ಹಿಂದೆ ಆಯೂಬ್‌ನನ್ನು ಬಂಧಿಸ ಲಾಗಿತ್ತು. ಈತನ ವಿಚಾರಣೆ ವೇಳೆಯೇ ಲೋಕೇಶ್‌ ಅಡಗಿರುವ ಮಾಹಿತಿ ಸಿಕ್ಕಿತ್ತು. ಲೋಕೇಶ್‌ ವಿರುದ್ಧ 2018 ಮತ್ತು 2021ರಲ್ಲಿ ಶೇಷಾದ್ರಿಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಖಾಲಿ ನಿವೇಶನ ಮಾರಾಟಕ್ಕಿದೆ ಎಂದು ದಿನ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀ ರಾತು ನೀಡುತ್ತಿದ್ದ ಮಾಲೀಕರನ್ನು ಸಂಪರ್ಕಿಸುತ್ತಿದ್ದ. ಬಳಿಕ ನಿವೇಶನ ನೋಡಬೇಕೆಂದು ಕರೆಸಿಕೊಂಡು ಜಾಗ ವೀಕ್ಷಣೆ ಮಾಡುತ್ತಿದ್ದ. ಬಳಿಕ ಅದರ ನಕಲು ದಾಖಲೆಗಳನ್ನು ಪಡೆದುಕೊಂಡು, ಮುಂಗಡವಾಗಿ ಒಂದುಷ್ಟ ಹಣ ಕೊಡುತ್ತಿದ್ದ. ಕೆಲ ದಿನಗಳ ನಂತರ ಅದೇ ದಾಖಲೆಗಳನ್ನು ಇಟ್ಟು ಕೊಂಡು ಅಸಲಿ ರೀತಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಅಲ್ಲದೆ, ಈ ದಾಖಲೆಗಳನ್ನು ಇಟ್ಟು ಕೊಂಡು ನಿವೇ ಶನ ಮಾರಾಟ ಮಾಡಿದ್ದಾರೆ ಎಂದು ದಾಖಲೆ ಗಳನ್ನು ಸೃಷ್ಟಿಸುತ್ತಿದ್ದ ಆರೋಪಿ, ಅವುಗಳನ್ನು ಬ್ಯಾಂಕ್‌ಗಳಿಗೆ ನೀಡಿ ಲಕ್ಷಾಂತರ ರೂ. ಸಾಲ ಪಡೆ ಯುತ್ತಿದ್ದ. ಹೀಗೆ ಸುಮಾರು ಐದಾರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೂ ವರೆ ಕೋಟಿ ರೂ.ಗೂ ಅಧಿಕ ಬ್ಯಾಂಕ್‌ ಸಾಲ ಪಡೆದುಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ವಿಜಯ ಮಲ್ಯ ಉದಾಹರಣೆಕೊಟ್ಟ ವಂಚಕ: ತಿಪಟೂರಿನಲ್ಲಿ ಆರೋಪಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಲು ಯತ್ನಿಸಿದಾಗ, ‘ವಿಜಯ್‌ ಮಲ್ಯ, ನೀರಜ್‌ ಮೋದಿ ಸಾವಿರಾರು ಕೋಟಿ ವಂಚಿಸಿದರೂ ಯಾರು ಕೇಳಲ್ಲ. ನಾನು ಮಾಡಿ ರುವ ಮೂರ್ನಾಲ್ಕು ಕೋಟಿ ವಂಚನೆ ಬಗ್ಗೆ ಕೇಳ್ಳೋಕೆ ಬರ್ತಿರಾ? ಅವರನ್ನೆಲ್ಲ ಏನೂ ಮಾಡಲ್ಲ. ನಮ್ಮನ್ನು ಮಾತ್ರ ಪ್ರಶ್ನೆ ಮಾಡ್ತೀರಾ? ನಾನು ಪೊಲೀಸರಿಗೆ ವಂಚನೆ ಮಾಡಿಲ್ಲ. ಬದಲಿಗೆ ಬ್ಯಾಂಕಿನವರಿಗೆ ಮಾಡಿರೋದು. ನೀವೇಕೆ ತಲೆ ಕೆಡಿಸಿಕೊಳ್ತೀರಾ? ಎಂದು ಅಚ್ಚರಿಕೆ ಹೇಳಿಕೆ ನೀಡಿ ದ್ದಾನೆ. ಅಲ್ಲದೆ, ಈ ಹಿಂದೆ ಬಂಧಿಸಲು ಹೋದಾಗ, ಕೂಡಲೇ ರಾಜಕೀಯ ಮುಖಂಡರ ಮೂಲಕ ಕರೆ ಮಾಡಿಸಿ, ಪೊಲೀಸರನ್ನು ವಾಪಸ್‌ ಕಳುಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ : ಈತನ ವಿರುದ್ಧ 5 ವರ್ಷಗಳ ಹಿಂದೆ ವಂಚನೆ ಪ್ರಕರಣ ದಾಖಲಾಗಿದ್ದರೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ವಿಲೇವಾರಿ ಆಗದ ಹಳೇ ಪ್ರಕರಣಗಳನ್ನು ಇತ್ತೀಚಿಗೆ ಪರಿಶೀಲನೆ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೀಡಿದ ಸೂಚನೆ ಮೇರೆಗೆ ಪ್ರಕರಣದ ಮರು ತನಿಖೆ ನಡೆಸಿದಾಗ ಆರೋಪಿ ತಿಪಟೂರಿನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಆರೋಪಿ ಲೋಕೇಶ್‌ ವಿರುದ್ಧ ಜಿಗಣಿ, ಶಂಕರಪುರ ಸೇರಿ ವಿವಿಧ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಈತ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದು ವಂಚಿಸಿದ್ದ. ಶೇಷಾದ್ರಿಪುರ ಠಾಣೆಯಲ್ಲಿ 2 ಕೇಸ್‌ಗಳ ಸಂಬಂಧ ಲೋಕೇಶ್‌ನನ್ನು ಬಂಧಿಸಲಾಗಿದೆ -ಶ್ರೀನಿವಾಸಗೌಡ, ಕೇಂದ್ರ ವಿಭಾಗ ಡಿಸಿಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next