ಬೆಂಗಳೂರು: ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಮಹಿಳೆಯೊಬ್ಬರಿಗೆ ಸೈಬರ್ ಕಳ್ಳರು 3.22 ಲಕ್ಷ ರೂ. ವಂಚಿಸಿದ್ದಾರೆ.
ಜೆ.ಪಿ.ನಗರದ ಚಂದ್ರಿಕಾ (64) ವಂಚನೆ ಗೊಳಗಾದವರು. ನ.8ರಂದುಅಪರಿಚಿತ ನಂಬರ್ನಿಂದ ಚಂದ್ರಿಕಾಗೆ ಕರೆ ಬಂದಿತ್ತು. ಅಪರಿಚಿತರು ತಮ್ಮನ್ನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡ ಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ.
ಹೀಗಾಗಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಕಳಿಸುವಂತೆ ಅಪರಿ ಚಿತರು ಹೇಳಿದ್ದರು. ಅದರಂತೆ ಚಂದ್ರಿಕಾ ಬ್ಯಾಂಕ್ ಖಾತೆಯ ಮಾಹಿತಿ ಕಳುಹಿಸಿದ ಬಳಿಕ ಹಂತ-ಹಂತವಾಗಿ ಇವರ ಖಾತೆ ಯಿಂದ 3. 22 ಲಕ್ಷ ರೂ. ಕಡಿತಗೊಂಡಿತ್ತು. ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.