ಬೆಂಗಳೂರು: ಯುಟ್ಯೂಬ್‌ನ ಜಾಹಿರಾತಿನಲ್ಲಿ ಸಿಕ್ಕ ವೆಬ್‌ಸೈಟ್ ಮೂಲಕ 599 ರೂ. ಮೌಲ್ಯದ ಬಟ್ಟೆ ಖರೀದಿಗಾಗಿ ಮಹಿಳೆಯೊಬ್ಬರು ಬರೋಬರಿ 1.36 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಈ ಸಂಬಂಧ ನಾಗರಬಾವಿ ನಿವಾಸಿ ಮಮತಾ ಕುಮಾರ್ ಎಂಬವರು ಅಪರಿಚಿತ ವ್ಯಕ್ತಿಯ ವಿರುದ್ಧ ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಯುಟ್ಯೂಬ್‌ನಲ್ಲಿ ಕರ್ವಿಮುಸೆ 21 ಶಾಪಿಫಿ.ಕಾಂ ಮೂಲಕ 599 ರೂ. ಮೌಲ್ಯದ ಬಟ್ಟೆ ಆರ್ಡರ್ ಮಾಡಿದ್ದರು. ಕ್ಯಾಶ್ ಆ್ಯಂಡ್ ಡೆಲಿವರಿ ಮೂಲಕ ಆರ್ಡರ್ ಪಡೆದುಕೊಂಡಿದ್ದರು. ಆದರೆ, ಬಟ್ಟೆ ಸರಿ ಇಲ್ಲದ ಕಾರಣ ವಾಪಸ್ ನೀಡಲು ಗೂಗಲ್ ಶೋಧಿಸಿದ್ದಾರೆ. ಆಗ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ ವ್ಯಕ್ತಿ ಕಸ್ಟಮರ್ ಕೇರ್ ಕಡೆಯವರು ಎಂದು ಹೇಳಿಕೊಂಡು ಮಮತಾ ಬಳಿಕ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಮಮತಾರ ಖಾತೆಯಿಂದ 1,36,082 ರೂ. ದೋಚಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು