ಬೆಂಗಳೂರು: ಕಡಿಮೆ ಬೆಲೆಗೆ ಅಂತರಾಜ್ಯ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿದ ಸೈಬರ್ ಕಳ್ಳರು ಮಹಿಳೆಗೆ 60 ಸಾವಿರ ರೂ. ವಂಚಿಸಿದ್ದಾರೆ.
ಮಾಗಡಿ ಮುಖ್ಯರಸ್ತೆಯ ಹೇಮಲತಾ (25) ವಂಚನೆಗೊಳಗಾದವರು.
ಹೇಮಲತಾ ಅವರು ಇನ್ ಸ್ಟಾಗ್ರಾಂನಲ್ಲಿ 360 ವೆಕೇಷನ್ಸ್ ಎಂಬ ಇನ್ ಸ್ಟಾ ಗ್ರಾಮ ಖಾತೆಯನ್ನು ನೋಡಿ ಅದರಲ್ಲಿದ್ದ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದಾಗ “ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು 360 ವೆಕೇಷನ್ಸ್ ಕಂಪ ನಿಯ ನಿರ್ದೇಶಕ ಎಂದು ಪರಿ ಚಯಿಸಿಕೊಂಡಿದ್ದ. ನಂತರ ನಮ್ಮ ಸಂಸ್ಥೆಯು ಕಡಿಮೆ ಬೆಲೆಗೆ ಅಂತಾ ರಾಜ್ಯ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದ.
ಆತನ ಸೂಚನೆಯಂತೆ ಹೇಮಲತಾ ಅವರು ಅಪರಿಚಿತ ಕೊಟ್ಟ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ 60 ಸಾವಿರ ರೂ. ಜಮೆ ಮಾಡಿದ್ದರು. ಇದಾದ ಬಳಿಕ ಆತ ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆ ಹೇಮಲತಾ ಅವರು ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.