Advertisement

Mangaluru; ಪಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ ವಂಚನೆ

11:42 PM Aug 29, 2023 | Team Udayavani |

ಮಂಗಳೂರು: ಪಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಿನಲ್ಲಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ರವಿವಾರದಂದು ದೂರುದಾರರಿಗೆ ಅಪರಿಚಿತ ವ್ಯಕ್ತಿ 918374917353 ಸಂಖ್ಯೆಯಿಂದ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಹೆಸರಿನಲ್ಲಿ ಸಂದೇಶದ ಲಿಂಕ್‌ ಕಳುಹಿಸಿದ್ದ. ದೂರುದಾರರು ಅದನ್ನು ಒತ್ತಿ ಅದರಲ್ಲಿ ಕೇಳಲಾದ ಮಾಹಿತಿಯನ್ನು ತುಂಬಿಸಿದ್ದರು. ಕೂಡಲೇ ಕರೆ ಮಾಡಿದ ಅಪರಿಚಿತ ವ್ಯಕ್ತಿ ಆತನನ್ನು ಬ್ಯಾಂಕ್‌ ಅಧಿಕಾರಿಯೆಂದು ಪರಿಚಯಿಸಿ ದೂರುದಾರರ ಪಾನ್‌ಕಾರ್ಡ್‌ ಅಪ್‌ಡೇಟ್‌ಗೆ ಮಾಹಿತಿ ನೀಡುವಂತೆ ಕೇಳಿದ.

ದೂರುದಾರರು ಅದನ್ನು ನಂಬಿ ಮಾಹಿತಿ ನೀಡಿದರು. ಒಟಿಪಿ ಕೂಡ ನೀಡಿದರು. ಅನಂತರ ಅವರ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಖಾತೆಯಿಂದ ಹಂತ ಹಂತವಾಗಿ 6,21,082 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಮಂಗಳೂರಿನ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next