Advertisement

ಫ್ಲ್ಯಾಟ್‌ ಮಾರಾಟ ಹೆಸರಿನಲ್ಲಿ ವಂಚನೆ: ಎರಡು ಪ್ರತ್ಯೇಕ ಪ್ರಕರಣ ದಾಖಲು

08:38 PM Mar 23, 2023 | Team Udayavani |

ಮಂಗಳೂರು: ನೀರುಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್‌ ಕೊಡಿಸುವುದಾಗಿ ವಂಚಿಸಿರುವ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣಗಳು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Advertisement

ಫ್ಲೋರಿನ್‌ ಪಿರೇರಾ ಮತ್ತು ಆಲ್ವಿನ್‌ ಜಾನ್‌ ಡಿ’ಸೋಜಾ ವಂಚನೆಗೆ ಒಳಗಾದವರು. ಮೊದಲನೇ ಆರೋಪಿ ಜಾಯ್ಸಿ ರೀನಾ ರಸ್ಕಿನ್ಹಾ ಅವರು ತಮಗೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫ್ಲೋರಿನ್‌ ಅವರು 102 ನಂಬರಿನ ಫ್ಲ್ಯಾಟ್‌ ಖರೀದಿ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡು, 21.27 ಲಕ್ಷ ರೂ. ಪಾವತಿಸಿದ್ದು, ಆ ಬಳಿಕ ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಎರಡನೇ ಆರೋಪಿಯಾಗಿರುವ ಮುರಳೀಧರ ಪೈ ಗೂಂಡಾಗಳೊಂದಿಗೆ ಫ್ಲ್ಯಾಟ್‌ಗೆ ಬಂದು ತಾನು ಈ ಮನೆಯನ್ನುಖರೀದಿಸಿರುವುದಾಗಿ ತಿಳಿಸಿದ್ದಾನೆ. ಮನೆ ಬಿಟ್ಟು ಕೊಡದಿದ್ದರೆ ನಿನ್ನನ್ನು ಮತ್ತು ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಜಾಯ್ಸಿ , ತನಗಿಂತ ಮೊದಲೇ ಎರಡನೇ ಆರೋಪಿಗೆ ಮನೆ ಮಾರಾಟ ಮಾಡಿ ಮೋಸ ಮಾಡಿರುವುದಾಗಿ ಫ್ಲೋರಿನ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಇದೇ ರೀತಿ ಆಲ್ವಿನ್‌ ಡಿ’ಸೋಜಾ ಅವರೂ, ಅದೇ ಆಪಾರ್ಟ್‌ಮೆಂಟ್‌ನ 103 ಮತ್ತು 104ನೇ ಫ್ಲ್ಯಾಟ್‌ ಖರೀದಿಸಿದ್ದು, ಹಂತ ಹಂತವಾಗಿ ತಲಾ 9.65 ಲಕ್ಷ ಮತ್ತು 15.77 ಲಕ್ಷ ರೂ. ಪಾವತಿಸಿದ್ದಾರೆ. ಬಳಿಕ 104ನೇ ಫ್ಲ್ಯಾಟ್‌ನಲ್ಲಿ ವಾಸಿಸಲು ಆರಂಭಿಸಿದ್ದಾರೆ. ಈ ವೇಳೆ ಅಲ್ಲಿಗೆ ತನ್ನ ಗೂಂಡಾಗಳೊಂದಿಗೆ ಬಂದ ಎರಡನೇ ಆರೋಪಿಯಾಗಿರುವ ಮುರಳೀಧರ ಪೈ ಅವರು, ಜೀವ ಬೆದರಿಕೆ ಹಾಕಿದ್ದಾರೆ. ಮೊದಲೇ ಮಾರಾಟ ಮಾಡಿ, ಜಾಯ್ಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next