Advertisement

Fraud: ಸಂಸದರ ಪುತ್ರನ ವಿರುದ್ಧ ದೂರು

11:42 PM Nov 17, 2023 | Team Udayavani |

ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್‌ ಎಂಬವರು ವಿವಾಹ ವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿ ಯೊಬ್ಬಳು ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.

Advertisement

ಬೆಂಗಳೂರಿನ ವಿಜಯನಗರದ ನಿವಾಸಿ 24 ವರ್ಷದ ಯುವತಿ ಕೊಟ್ಟಿರುವ ದೂರಿನ ಆಧಾರದಲ್ಲಿ ಮೈಸೂರಿನ ನಿವಾಸಿ ವೈ.ಡಿ.ರಂಗನಾಥ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ.
ದೂರುದಾರ ಯುವತಿ ಬೆಂಗಳೂ ರಿನಲ್ಲಿ ರಿಯಲ್‌ ಎಸ್ಟೇಟ್‌ ಡೀಲರ್‌ ಆಗಿದ್ದು, ರಂಗನಾಥ್‌ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪ ನ್ಯಾಸಕರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಪಾರ್ಟಿಯೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿ ಕೊಂಡಿರುವ ರಂಗನಾಥ್‌ ಬಳಿಕ ಮೈಸೂರಿನ ಹೊಟೇಲ…ನಲ್ಲಿ ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರಂಗನಾಥ್‌ರಿಂದಲೂ ದೂರು
ಮತ್ತೂಂದೆಡೆ ಯುವತಿಯು ಫೋಟೋ, ಆಡಿಯೋ ಇಟ್ಟು ಕೊಂಡು 15 ಲಕ್ಷ ರೂ.ಗೆ ಬ್ಲ್ಯಾಕ್‌ವೆುàಲ್‌ ಮಾಡುತ್ತಿರುವುದಾಗಿ ಆರೋಪಿಸಿ ರಂಗನಾಥ್‌ ಮೈಸೂರಿನ ವಿಜಯನಗರ ಠಾಣೆಯಲ್ಲಿ ಯುವತಿ ವಿರುದ್ಧ ದೂರು ನೀಡಿದ್ದಾರೆ. ಸಂಬಂಧ ವಿಜಯನಗರ ಠಾಣೆ ಪೊಲೀಸರು ಯುವತಿಯ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿ ಆರೋಪವೇನು ?
2022ರಲ್ಲಿ ಸ್ನೇಹಿತರ ಮೂಲಕ ರಂಗನಾಥ್‌ ಪರಿಚಯವಾಗಿದ್ದು,. ಆಗಾಗ ನನಗೆ ಫೋನ್‌ ಮಾಡು ತ್ತಿದ್ದರು. ಸ್ವಲ್ಪ ದಿನಗಳ ಬಳಿಕ ರಂಗನಾಥ್‌ ನನಗೆ ಕರೆ ಮಾಡಿ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂದು ತಿಳಿಸಿದ್ದರಲ್ಲದೆ ಮದುವೆಯಾಗುವ ಭರವಸೆ ನೀಡಿ ಮೈಸೂರಿನ ಹೊಟೇಲೊಂದರಲ್ಲಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿ, ಬೆಂಗಳೂರಿಗೆ ಕಳಿಸಿಕೊಟ್ಟಿರುತ್ತಾನೆ. ಇತ್ತೀಚೆಗೆ ರಂಗನಾಥ್‌ ಮೊದಲಿನ ಹಾಗೆ ನನ್ನ ಜತೆಗೆ ಮಾತನಾಡುತ್ತಿಲ್ಲ. ಮದುವೆಯಾಗಲು ಹೇಳಿದರೆ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಗನ ಒಡವೆ ಕಸಿದುಕೊಂಡು ಯುವತಿಯಿಂದಲೇ ಬ್ಲ್ಯಾಕ್‌ವೆುàಲ್‌
ನನ್ನ ಪುತ್ರನ ಒಡವೆಗಳೆಲ್ಲವನ್ನೂ ಕಸಿದುಕೊಂಡಿರುವ ಯುವತಿಯು ಈಗ ಆತನ ವಿರುದ್ಧವೇ ಆರೋಪ ಮಾಡುತ್ತಾ ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದಾಳೆ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಾಮಾಜಿಕ ನ್ಯಾಯ ಸಮಿತಿ ಸಭೆ ನಿಮಿತ್ತ ದಿಲ್ಲಿಗೆ ಹೋಗಿ ಬರುತ್ತಿದ್ದಾಗ ಆ ಯುವತಿ ನನಗೆ ಕರೆ ಮಾಡಿದ್ದು, ನನ್ನ ಮಗನ ಬಗ್ಗೆ ಆರೋಪ ಮಾಡಿದಳು. ಅನ್ಯಾಯವಾಗಿದ್ದರೆ ಕಾನೂನು ಪ್ರಕಾರ ನೋಡಿಕೊಳ್ಳಿ ಎಂದು ಸಲಹೆ ನೀಡಿದೆ. ಈ ಕುರಿತು ಮಗನನ್ನೂ ವಿಚಾರಿಸಿದ್ದೇನೆ. ಅವನು ಆಕೆ ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದಾಳೆ ಎಂದು ಹೇಳಿದ್ದಾನೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡುತ್ತಿದ್ದಾರೆ. ನನ್ನ ಮಕ್ಕಳು ಇಂಥ ಅನ್ಯಾಯ ಮಾಡುವವರಲ್ಲ. ನನ್ನ ಘನತೆಗೆ ಚ್ಯುತಿ ತರಲು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next