Advertisement
ಒಂದು ಸಲ ವ್ಯಾಪಾರಿ ಸರಕುಗಳೊಂದಿಗೆ ವಿದೇಶಕ್ಕೆ ಹೋದ. ಆದರೆ ಕಡಲಿನ ಮಧ್ಯೆ ಹಡಗು ಚಲಿಸುತ್ತಿರುವಾಗ ಭಾರೀ ತುಫಾನು ಎದ್ದಿತು. ಸರಕುಗಳೊಂದಿಗೆ ಹಡಗು ಒಂದು ಬಂಡೆಗೆ ಬಡಿದು ನುಚ್ಚುನೂರಾಯಿತು. ವ್ಯಾಪಾರಿ ಹೇಗೋ ಜೀವ ಉಳಿಸಿಕೊಂಡು ಮನೆಗೆ ಹಿಂತಿರುಗಿದ. ಅವನ ಇಬ್ಬರು ಹೆಣ್ಣುಮಕ್ಕಳಿಗೆ ಹಡಗು ಮುಳುಗಿತೆಂದು ದುಃಖವಾಗಲಿಲ್ಲ. ಆದರೆ ತಂದೆ ತಾವು ಹೇಳಿದ ಉಡುಗೊರೆ ತರಲಿಲ್ಲವೆಂದು ಕೋಪ ಬಂದಿತು. ಕಿರಿಯ ಮಗಳು ಮಾತ್ರ ತಂದೆಗೆ ಸಾಂತ್ವನ ಹೇಳಿದಳು. ತನ್ನಲ್ಲಿರುವ ಎಲ್ಲ ಹಣವನ್ನೂ ವ್ಯಾಪಾರಿ ಆ ಸಲ ಸರಕುಗಳನ್ನು ಕೊಳ್ಳಲು ಮುಗಿಸಿದ್ದ. ಜೊತೆಗೆ ಬೇರೆಯವರಿಂದ ಹಣವನ್ನು ಸಾಲವಾಗಿ ಪಡೆದಿದ್ದ. ಸಾಲ ಕೊಟ್ಟವರು ಅವನ ಹಡಗು ಮುಳುಗಿದ ಸುದ್ದಿ ಕೇಳಿ ಮನೆಗೆ ಬಂದರು. ತಮ್ಮ ಹಣಕ್ಕಾಗಿ ವ್ಯಾಪಾರಿಯ ಮನೆಯನ್ನು ಅದರೊಳಗಿರುವ ಸಾಮಗ್ರಿಗಳ ಜೊತೆಗೆ ಸ್ವಾಧೀನ ಮಾಡಿಕೊಂಡು ಅವನನ್ನು ಮನೆಯಿಂದ ಹೊರಗೆ ಹಾಕಿದರು.
Related Articles
Advertisement
ವ್ಯಾಪಾರಿ ಸೌಧದ ಮುಂದೆ ನಿಂತು ಮನೆಯವರನ್ನು ಕರೆದ. ಯಾರೂ ಹೊರಗೆ ಬರಲಿಲ್ಲ. ಅವನು ಧೈರ್ಯದಿಂದ ಒಂದು ಗುಲಾಬಿಯನ್ನು ಕಿತ್ತುಕೊಂಡ. ಮರುಕ್ಷಣವೇ ಒಂದು ದೈತ್ಯ ಗಾತ್ರದ ಕರಡಿ ಪ್ರತ್ಯಕ್ಷವಾಯಿತು. ಅದು ಅವನ ಕೈಗಳನ್ನು ಹಿಡಿದುಕೊಂಡು, “”ನನ್ನ ತೋಟದಿಂದ ಗುಲಾಬಿಯನ್ನು ಕದ್ದ ತಪ್ಪಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಅಬ್ಬರಿಸಿತು. ವ್ಯಾಪಾರಿ ಕರಡಿಯ ಕಾಲುಗಳಿಗೆರಗಿದ. “”ನನ್ನ ಮೂರನೆಯ ಮಗಳಿಗೆ ಗುಲಾಬಿಯ ಮೇಲೆ ಆಸೆಯಾಗಿತ್ತು. ಅವಳಿಗಾಗಿ ಈ ತಪ್ಪು$ ಕೆಲಸ ಮಾಡಿದೆ. ನನ್ನನ್ನು ಕ್ಷಮಿಸಬೇಕು” ಎಂದು ಪ್ರಾರ್ಥಿಸಿದ. ಕರಡಿಯು, “”ನಿನಗೆ ಹೆಣ್ಣುಮಕ್ಕಳಿದ್ದಾರೆಯೆ? ಈ ತಪ್ಪಿಗಾಗಿ ಅವರಲ್ಲಿ ಒಬ್ಬಳನ್ನು ನಾಳೆ ಬೆಳಗಾಗುವ ಮೊದಲು ಇಲ್ಲಿಗೆ ಕಳುಹಿಸಿಕೊಡು. ತಪ್ಪಿದರೆ ನೀನು ಸತ್ತುಹೋಗುವೆ’ ಎಂದು ಎಚ್ಚರಿಸಿತು.
ವ್ಯಾಪಾರಿ ಮನೆಗೆ ಬಂದ. ಮಗಳಂದಿರಿಗೆ ಉಡುಗೊರೆಗಳನ್ನು ನೀಡಿದ. ಅವನ ಕಂದಿದ ಮುಖ ನೋಡಿ ಅವರು ಅದರ ಕಾರಣ ಕೇಳಿದರು. ವ್ಯಾಪಾರಿ ಕರಡಿಯ ವಿಷಯ ಹೇಳಿದ. “”ನಾಳೆ ಬೆಳಗಾಗುವ ಮೊದಲು ನಿಮ್ಮಲ್ಲಿ ಒಬ್ಬರು ಕರಡಿಯ ಬಳಿಗೆ ಹೋಗಬೇಕು. ಯಾರು ತಯಾರಿದ್ದೀರಿ?” ಎಂದು ಕೇಳಿದ. ಹಿರಿಯವಳು, “”ನಿಮ್ಮ ಬದುಕಿಗಾಗಿ ನಾನು ನನ್ನ ಭವಿಷ್ಯವನ್ನು ಹಾಳು ಮಾಡಲು ಬಯಸುವುದಿಲ್ಲ” ಎಂದಳು. ಎರಡನೆಯವಳು, “”ನೀವು ಯಾರಿಗಾಗಿ ಗುಲಾಬಿಯನ್ನು ಕಿತ್ತಿದ್ದೀರೋ ಅವಳೇ ಹೋಗಲಿ, ನಾನು ಹೋಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದಳು. ಕಿರಿಯ ಮಗಳು ಕರಡಿಯ ಬಳಿಗೆ ಹೋಗಲು ಮುಂದೆ ಬಂದಳು. “”ಅಪ್ಪ, ನನಗೆ ನೀವು ಬದುಕುವುದು ಮುಖ್ಯ. ನಾನು ಕರಡಿಯ ಬಳಿಗೆ ಹೋಗಲು ಸಿದ್ಧಳಿದ್ದೇನೆ’ ಎಂದು ಒಪ್ಪಿಕೊಂಡಳು.
ವ್ಯಾಪಾರಿ ಕಿರಿಯ ಮಗಳನ್ನು ಕರೆದುಕೊಂಡು ಹೋಗಿ ಕರಡಿಯ ಸೌಧದ ಬಳಿ ಬಿಟ್ಟು ಹಿಂತಿರುಗಿದ. ಕರಡಿ ಅವಳನ್ನು ತುಂಬ ಪ್ರೀತಿಯಿಂದ ಸ್ವಾಗತಿಸಿತು. ತನ್ನ ಸೌಧದಲ್ಲಿ ಅವಳಿಗೆ ಏನೇನು ಸೌಕರ್ಯ ಬೇಕೋ ಅದೆಲ್ಲವನ್ನೂ ಒದಗಿಸಿ ಕೊಟ್ಟಿತು. ತುಂಬ ಸಮಯ ಕಳೆದ ಮೇಲೆ ವ್ಯಾಪಾರಿಯ ಮಗಳಿಗೆ ತನ್ನ ತಂದೆಯನ್ನು ನೋಡಿ ಬರಬೇಕೆಂಬ ಬಯಕೆಯಾಯಿತು. ಕರಡಿಯೊಂದಿಗೆ ಈ ವಿಷಯ ಹೇಳಿದಳು. ಅದು, “”ನೀನು ಹೋಗಿ ಬರಬಹುದು. ಆದರೆ ಒಂದೇ ವಾರದಲ್ಲಿ ಮರಳಿ ಬರಬೇಕು. ನನ್ನ ಪ್ರಾಣ ನಿನ್ನ ಮೇಲಿದೆ. ಅರೆಕ್ಷಣ ನೀನು ಬರುವಾಗ ತಡವಾದರೂ ನಾನು ಬದುಕಿರುವುದಿಲ್ಲ. ನಿನಗೆ ಒಂದು ಕನ್ನಡಿಯನ್ನು ಕೊಡುತ್ತೇನೆ. ಅದರ ಮೇಲೆ ಮೂರು ಸಲ ತಟ್ಟಿದರೆ ಅದು ಒಂದು ಹಾಸಿಗೆಯಾಗುತ್ತದೆ. ಈ ಹಾಸಿಗೆಯ ಮೇಲೆ ಕುಳಿತು ಆಕಾಶ ಮಾರ್ಗದಲ್ಲಿ ತಂದೆಯ ಮನೆಗೆ ಹೋಗು. ಅದೇ ರೀತಿ ಮರಳಿ ಬಾ” ಎಂದು ಹೇಳಿ ಕನ್ನಡಿಯನ್ನು ಕೊಟ್ಟಿತು.
ವ್ಯಾಪಾರಿಯ ಮಗಳು ತಂದೆಯ ಬಳಿಗೆ ಬಂದಳು. ಅವಳ ಅಕ್ಕಂದಿರಿಗೆ ಶ್ರೀಮಂತ ಯುವಕರೊಂದಿಗೆ ಮದುವೆಯಾಗಿತ್ತು. ಒಂಟಿಯಾಗಿದ್ದ ವ್ಯಾಪಾರಿಗೆ ಮಗಳನ್ನು ಕಂಡು ಆದ ಸಂತೋಷ ಅಷ್ಟಿಷ್ಟಲ್ಲ. ಒಂದು ವಾರ ಕಳೆಯಿತು. ತಂದೆಯನ್ನು ಬಿಟ್ಟುಹೋಗಲು ಅವಳಿಗೆ ಮನಸ್ಸೇ ಬರಲಿಲ್ಲ. ಆಗ ಒಂದು ಸಲ ಕರಡಿ ಕೊಟ್ಟಿದ್ದ ಕನ್ನಡಿಯನ್ನು ನೋಡಿದಳು. ಅದರಲ್ಲಿ ಕರಡಿಯ ಪ್ರತಿಬಿಂಬ ಕಾಣಿಸಿತು. ಹೇಳಿದ ಸಮಯಕ್ಕೆ ಅವಳು ಹಿಂತಿರುಗದ ಕಾರಣ ಕರಡಿ ಕೊನೆಯುಸಿರೆಳೆಯುತ್ತ ಇತ್ತು.
ಕೂಡಲೇ ವ್ಯಾಪಾರಿಯ ಮಗಳು ಕನ್ನಡಿಯ ಮೇಲೆ ಕುಳಿತು ಕರಡಿಯ ಬಳಿಗೆ ಧಾವಿಸಿದಳು. ಕುಟುಕು ಜೀವ ಹಿಡಿದಿದ್ದ ಅದನ್ನು ಅಪ್ಪಿಕೊಂಡು ಕಣ್ಣೀರಿಳಿಸಿದಳು. ಅವಳ ಕಣ್ಣೀರಿನ ಹನಿಗಳು ಮೈಗೆ ಬೀಳುತ್ತಿದ್ದ ಹಾಗೆ ಕರಡಿಯ ಮೈಯ ಕೂದಲುಗಳು ಕರಗುತ್ತ ಬಂದವು. ಕಡೆಗೆ ಅದು ಒಬ್ಬ ರಾಜಕುಮಾರನಾಗಿ ಬದಲಾಯಿಸಿ ಎದ್ದು ನಿಂತಿತು. “”ನನ್ನ ತಾಯಿ ಗರ್ಭಿಣಿಯಾಗಿದ್ದಾಗ ಒಂದು ಕರಡಿಯ ಮೈಗೆ ಬೆಂಕಿ ಹಾಕಿಸಿದಳಂತೆ. ಸಾಯುವಾಗ ಕರಡಿಯು ಅವಳ ಮಗು ಕರಡಿಯಾಗಿರಲಿ ಎಂದು ಶಪಿಸಿತಂತೆ. ಈ ಕರಡಿಯನ್ನು ಹೆಣ್ಣುಮಗಳೊಬ್ಬಳು ಪ್ರೀತಿಯಿಂದ ಕಂಬನಿಯ ಮಳೆಯಲ್ಲಿ ನೆನೆಸಿದಾಗ ಮನುಷ್ಯನಾಗುವುದಾಗಿ ಹೇಳಿತ್ತು. ನಿನ್ನಿಂದ ಹೊಸ ಮನುಷ್ಯನಾಗಿದ್ದೇನೆ” ಎಂದು ಅವನು ಹೇಳಿದ. ತನ್ನ ಅರಮನೆಗೆ ಬಂದು ಅವಳೊಂದಿಗೆ ಸುಖವಾಗಿದ್ದ. ವ್ಯಾಪಾರಿಯೂ ಮಗಳ ಜೊತೆಗೇ ನೆಲೆಸಿದ.
ಪ. ರಾಮಕೃಷ್ಣ ಶಾಸ್ತ್ರಿ