Advertisement

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

12:17 AM Jul 09, 2024 | Team Udayavani |

ಪ್ಯಾರಿಸ್‌: ಫ್ರಾನ್ಸ್‌ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅತಂತ್ರ ಸಂಸತ್‌ನ ಸುಳಿವು ನೀಡಿದೆ. ಸಂಸತ್‌ನ ಕೆಳಮನೆ ನ್ಯಾಶನಲ್‌ ಅಸೆಂಬ್ಲಿಗೆ ನಡೆದ ಚುನಾವ ಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.

Advertisement

577 ಕ್ಷೇತ್ರಗಳ ಪೈಕಿ ಎಡಪಂಥೀಯ ಗ್ರೀನ್‌ ನ್ಯೂ ಪಾಪ್ಯುಲರ್‌ ಫ್ರಂಟ್‌ 182 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಗೇಬ್ರಿ ಯಲ್‌ ಅಟ್ಟಾಲ್‌ ರಾಜೀನಾಮೆ ನೀಡಿ ದ್ದರೂ, ಅದನ್ನು ಅಧ್ಯಕ್ಷ ಮ್ಯಾಕ್ರನ್‌ ಸ್ವೀಕರಿಸಿಲ್ಲ. ಮಾಸಾಂತ್ಯದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟವಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಮತ ಎಣಿಕೆ ನಡೆಯುತ್ತಿದ್ದರೂ ಮುಂದಿನ ರವಿವಾರ ಪೂರ್ಣ ಫ‌ಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.

ಬಲಪಂಥೀಯರು ಪ್ರಬಲವಾಗಿ ರುವ ನ್ಯಾಶನಲ್‌ ರ್‍ಯಾಲಿ ಕೂಟ 140 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಸಮೀಕ್ಷೆಗಳು ತಿಳಿಸಿವೆ. 2022ರಲ್ಲಿ ಈ ಒಕ್ಕೂಟ 89 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಅಧ್ಯಕ್ಷ ಮ್ಯಾಕ್ರನ್‌ ನೇತೃತ್ವದ ಸೆಂಟರಿಸ್ಟ್‌ ಅಲಯನ್ಸ್‌ 163 ಕ್ಷೇತ್ರಗಳಲ್ಲಿ ಮುನ್ನಡೆ ಯಲ್ಲಿದೆ. ಒಟ್ಟು 577 ಸ್ಥಾನಗಳಿದ್ದು, ಸರಕಾರ ರಚಿಸಬೇಕಾದರೆ 289 ಸದಸ್ಯ ಬಲಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next