ದೋಹಾ: ವಿಶ್ವಕಪ್ ಫುಟ್‌ಬಾಲ್ ಫೈನಲ್‌ಗೆ ಕ್ರೀಡಾ ದಿಗ್ಗಜರನೇಕರು ಸಾಕ್ಷಿ ಯಾದರು. ವಿಶ್ವ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್, ಟೆನಿಸಿಗ ನೊವಾಕ್ ಜೊಕೋವಿಕ್, ಗಾಯಾಳಾಗಿ ಕೂಟದಿಂದ ಹೊರಗುಳಿದ ಫ್ರೆಂಚ್ ಫುಟ್ಬಾಲಿಗ ಪೌಲ್ ಪೋಗ್ಬ, ಪೋರ್ಚುಗಲ್ ಫುಟ್‌ಬಾಲ್ ತಂಡದ ಮಾಜಿ ನಾಯಕ ಲೂಯಿಸ್ ಫಿಗೊ, ಸ್ವೀಡನ್ ಫುಟ್‌ಬಾಲ್ ಐಕಾನ್ ಇಬ್ರಾಹಿಮೋವಿಕ್, ಇಂಗ್ಲೆಂಡ್‌ನ ಖ್ಯಾತ ಫುಟ್ಬಾಲಿಗ ಡೇವಿಡ್ ಬೇಕ್‌ಹ್ಯಾಮ್ ಮೊದಲಾದವರು ಹಾಜರಿದ್ದರು.
ಫೈನಲ್ ವೀಕ್ಷಿಸಿದ ಭಾರತದ ಪ್ರಮುಖರೆಂದರೆ ಸಿನೆಮಾ ತಾರೆಗಳಾದ ರಣವೀರ್ ಸಿಂಗ್, ಮಮ್ಮುಟ್ಟಿ, ಮೋಹನ್‌ಲಾಲ್ ಮತ್ತು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿತು.