Advertisement

ಫ್ರಾನ್ಸ್‌: ಮೇ ಬಳಿಕ‌ ಅತೀ ಹೆಚ್ಚು ಪ್ರಕರಣ; ಸಿಯೋಲ್‌ನಲ್ಲಿ ಮಾಸ್ಕ್ ಕಡ್ಡಾಯ

01:53 AM Aug 25, 2020 | mahesh |

ಮಣಿಪಾಲ: ಕಳೆದ 24 ಗಂಟೆಗಳಲ್ಲಿ ಫ್ರಾನ್ಸ್‌ನಲ್ಲಿ 4,900 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಮೇ ಅನಂತರದ ಒಂದು ದಿನದಲ್ಲಿ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಗ ಹರಡುತ್ತಿರುವ ಸಾಂಕ್ರಾಮಿಕ ರೋಗವು ಫೆಬ್ರವರಿಯಂತೆ ತನ್ನ ಪ್ರಸರಣ ವ್ಯಾಪ್ತಿಯನ್ನು ಹೊಂದಿಲ್ಲ. ಸೋಂಕು 40ರಿಂದ 60 ವರ್ಷದೊಳಗಿನ ಜನರಲ್ಲಿ ನಾಲ್ಕು ಪಟ್ಟು ವೇಗವಾಗಿ ಹರಡುತ್ತಿದೆ. ಯುವಜನರು ಈ ರೋಗವನ್ನು ವೃದ್ಧರಿಗೆ ಹರಡಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Advertisement

ಸಿಯೋಲ್‌ನಲ್ಲಿ ಮಾಸ್ಕ್ ಧರಿಸುವುದು ಅವಶ್ಯಕ
ದಕ್ಷಿಣ ಕೊರಿಯಾ ಸೋಮವಾರ ರಾಜಧಾನಿ ಸಿಯೋಲ್‌ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಸಿಯೋಲ್‌ನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯ ಎಂದು ಸರಕಾರ ಹೇಳಿದೆ. ಕಳೆದ ತಿಂಗಳಿನಿಂದ ಸಿಯೋಲ್‌ನಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ ನಗರವು ಸಾಮಾಜಿಕ ದೂರವಿಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ರಷ್ಯಾದಲ್ಲಿ ರವಿವಾರ 4,744 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 961493ಕ್ಕೆ ತಲುಪಿದೆ. ರವಿವಾರ 65 ಸಾವುಗಳೊಂದಿಗೆ, ಸಾವಿನ ಸಂಖ್ಯೆ 1,6448ಕ್ಕೆ ಏರಿಕೆಯಾಗಿದೆ. ಸೋಂಕು ಪ್ರಕರಣಗಳಲ್ಲಿ ರಷ್ಯಾ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾ ತನ್ನ ಲಸಿಕೆಯ ಮೊದಲ ಬ್ಯಾಚ್‌ ಸ್ಪುಟ್ನಿಕ್‌-ವಿ ತಯಾರಿಸಲು ಘೋಷಿಸಿದೆ.

ವಿಶ್ವದ ಹಲವು ದೇಶಗಳಲ್ಲಿ ಇದರ ಲಸಿಕೆಯ ಬಗ್ಗೆ  ಮಾನವ ಪ್ರಯೋಗ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next