Advertisement

ಚತುಷ್ಪಥ ರಸ್ತೆ 30 ಮೀಟರ್‌ಗೆ ಇಳಿಕೆ

04:14 PM Dec 30, 2020 | Team Udayavani |

ಹೊನ್ನಾವರ: ಕರಾವಳಿ ಚತುಷ್ಪಥಘೋಷಣೆ ಯೊಂದಿಗೆ ಸರ್ವೇಆರಂಭವಾದಾಗ ಕೆಲವರು ತಮ್ಮ ಆಸ್ತಿಉಳಿಸಲೆಂದು ರಾಜಕಾರಣಿಗಳಿಗೆಗಂಟು ಬಿದ್ದರು. ಅವರು ತಮ್ಮ ಶಿಷ್ಯರಹಿತಾಸಕ್ತಿಗಾಗಿ ಕೇಂದ್ರದೊಂದಿಗೆವ್ಯವಹರಿಸಿ ಕಾಯಂ ಕಂಟಕ ತಂದಿಟ್ಟಿದ್ದಾರೆ.

Advertisement

ಈಗ ಕಡಿಮೆ ಜನಸಂದಣಿ, ಕಡಿಮೆಕೊಂಡಿ ರಸ್ತೆ ಇರುವಲ್ಲಿ ಮಾತ್ರ 45ಮೀ, ಹೆಚ್ಚು ಜನರ ಓಡಾಟ, 4 ರಸ್ತೆಗಳಸರ್ಕಲ್‌ ಮತ್ತು ನಗರ ಮಧ್ಯೆ ರಾಷ್ಟ್ರೀಯಹೆದ್ದಾರಿ ಕೇವಲ 30 ಮೀ. ಇದರಿಂದಆಗಬಹುದಾದ ಅನಾಹುತಗಳು ಲೆಕ್ಕವಿಲ್ಲದಷ್ಟು. ಕುಮಟಾದಲ್ಲಿ ಬೈಪಾಸ್‌ ಬೇಡಿಕೆಯಿತ್ತು, ಹೊನ್ನಾವರದಲ್ಲಿ ಮೇಲ್ಸೇತುವೆ ಬೇಡಿಕೆಯಿತ್ತು. ಭಟ್ಕಳದಲ್ಲಿ ಮಾತ್ರ ಮೇಲ್ಸೇತುವೆ ಮಂಜೂರು ಮಾಡಿಕುಮಟಾ ಬೈಪಾಸ್‌ ಮತ್ತು ಹೊನ್ನಾವರದಮೇಲ್ಸೇತುವೆ ಕೈಬಿಡಲಾಗಿದೆ.

ಕುಮಟಾದಲ್ಲಿ ಶಿರಸಿ, ಸಿದ್ದಾಪುರ ರಾಜ್ಯ ಹೆದ್ದಾರಿ ಜೋಡಣೆಯಿದೆ. ಹೊನ್ನಾವರದಲ್ಲಿ ಬೆಂಗಳೂರು, ಹುಬ್ಬಳ್ಳಿ,ಮಂಗಳೂರು, ಗೋವಾ ರಾಷ್ಟ್ರೀಯ ಹೆದ್ದಾರಿಗಳು ಜೋಡಣೆಯಿದೆ. ಭಟ್ಕಳಕ್ಕೆ ಸಿದ್ದಾಪುರದ ರಾಜ್ಯ ಹೆದ್ದಾರಿಜೋಡಣೆಯಿದೆ. ಈ ರಸ್ತೆಯ ಸಂಚಾರದ ಹೊರತಾಗಿ ಗ್ರಾಮೀಣ ಭಾಗದಿಂದಶಹರಕ್ಕೆ ಬಂದು ಹೋಗುವ ಲಕ್ಷಾಂತಜನರ ಓಡಾಟವಿದೆ. ಇಂತಹ ಜಂಕ್ಷನ್‌ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 60 ಮೀ. ಮಾಡಬೇಕಿತ್ತು. ಕೊನೆಪಕ್ಷ 45 ಮೀ. ಮಾಡದೆ ರಾಜಕಾಣಿಗಳ ಒತ್ತಡದಲ್ಲಿ ಕೇವಲ 30 ಮೀ.ಗೆ ಮಿತಿಗೊಳಿಸಿದೆ.

ಈ ಮೂರು ನಗರಗಳಲ್ಲಿ ಮತ್ತು ಭಟ್ಕಳದ ಶಿರಾಲಿ, ಹೊನ್ನಾವರದ ಹಳದೀಪುರ, ಕರ್ಕಿ ಪೇಟೆಗಳಿಗೂ30 ಮೀ. ಮಿತಿಗೊಳಿಸಲಾಗಿದೆ. ಇಲ್ಲಿಸರ್ವೀಸ್‌ ರಸ್ತೆಗಳಿಲ್ಲ, ಮೇಲ್ಸೇತುವೆಗಳೂಇಲ್ಲ. ಚತುಷ್ಪಥದಲ್ಲಿ ಓಡಾಡುವವಾಹನಗಳಿಗೆ ಈ ಮೂರು ಸೇತುವೆಗಳನಗರ ಪ್ರದೇಶದಲ್ಲಿ ಹಾದುಹೋಗುವಾಗಸಮಸ್ಯೆ ಆಗುತ್ತದೆ. ಮಾತ್ರವಲ್ಲ ಈತಾಲೂಕಿನ ಗ್ರಾಮೀಣ ಭಾಗದ ವರಿಗೂ

ಸಮಸ್ಯೆ ತಪ್ಪಿದಲ್ಲ. ಜನ, ವಾಹನ ಇಲ್ಲದಲ್ಲಿ45 ಮೀ. ರಸ್ತೆಯಲ್ಲಿ ಧಾವಿಸಿಬರುವವಾಹನಗಳು ಜನ, ವಾಹನದದಟ್ಟಣೆ ಇದ್ದಲ್ಲಿ 30 ಮೀ. ರಸ್ತೆಯಲ್ಲಿಸಾಗುವುದರ, ಇದರ ಅಪಾಯದಅಂದಾಜು ಎಲ್ಲರಿಗೂ ಇದ್ದರು ಕೆಲವರಿಗೆಇದಾವುದೂ ಸಂಬಂಧವಿಲ್ಲ. ಅವರ ಆಸ್ತಿ, ಅವರ ಅಧಿಕಾರ ಉಳಿದರೆ ಸಾಕು. ದಕ್ಷಿಣ ಕನ್ನಡದಲ್ಲಿ ಕುಂದಾಪುರ, ಬೈಂದೂರು,ಉಡುಪಿ ಹಾದು ಮಂಗಳೂರು ತನಕಹೋಗುವಾಗ 45-60 ಮೀ. ವರೆಗೆ ರಸ್ತೆಅಗಲವಿದೆ, ಹತ್ತಾರು ಮೇಲ್ಸೇತುವೆಗಳಿವೆ.ರಾಜಕಾರಣಿಗಳು ಕೆಲವರಿಗಾಗಿ ನಾಟಕವಾಡಿದ್ದು ತಡವಾಗಿ ಸಂಸದಅನಂತಕುಮಾರ ಹೆಗಡೆಯವರಿಗೆ ಗೊತ್ತಾಗಿ ಈ ತಾಲೂಕುಗ ಯಾರ ಆಸ್ತಿ ಉಳಿಸಲು ಜನರನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ ಎಂದು ಹೆದ್ದಾರಿ ಪ್ರಾಧಿಕಾರವನ್ನು ಪ್ರಶ್ನಿಸಿಎಲ್ಲ ತಾಲೂಕುಗಳಲ್ಲಿ 45 ಮೀವಿಸ್ತರಣೆಯಾಗಲಿ, ಎಲ್ಲೆಲ್ಲಿಬೇಡಿಕೆಯಿದೆಯೋ ಅಲ್ಲಿ ಸರ್ವಿಸ್‌ ರಸ್ತೆ,ಮೇಲ್ಸೇತುವೆ ಮಾಡಿ ಎಂದು ಹೇಳಿದ್ದಾರೆ.

Advertisement

ಅವರು ಹೇಳುತ್ತಾರೆಯೇ ವಿನಃ ಮಾಡಿಸು ವುದಿಲ್ಲ ಎಂದು ಎಲ್ಲರಿಗೂಗೊತ್ತಿದೆ. 30 ಮೀ. ಅಗಲದಚತುಷ್ಪಥದಲ್ಲಿ ಮಧ್ಯೆ ಡಿವೈಡರ್‌ಗೋಡೆ ಡಿಕ್ಕಿ ಹೊಡೆಸಿಕೊಳ್ಳಲೆಂದೇಮಾಡಿದಂತಿರುತ್ತದೆ. ಶಾಸಕರೂ ಈ ಕುರಿತು ಮಾತನಾಡುವುದಿಲ್ಲ. ಹೆಸರಿಗಷ್ಟೇನಿರ್ಮಾಣವಾಗುವ ಚತುಷ್ಪಥ ಜನರಪಾಲಿಗೆ ಶಾಪವಾಗದಿದ್ದರೆ ಸಾಕು. ಶರಾವತಿಸರ್ಕಲ್‌ನಿಂದ ಕಾಲೇಜುಸರ್ಕಲ್‌ವರೆಗೆಹೆಚ್ಚು ಜನ ಓಡಾಡುತ್ತಾರೆ. ನಾಲ್ಕೈದುಗ್ರಾಮೀಣ ರಸ್ತೆಗಳ ಸಂಪರ್ಕವಿದೆ. ಇಲ್ಲಿ 30 ಮೀ. ಉಳಿದೆಡೆ 45 ಮೀ.ಎಂದು ಹೇಳಲಾಗುತ್ತಿದೆ. ಹೇರುವುದು ನಡೆದಿದೆಯೇ ವಿನಃ ಜನ ಹೇಳುವುದನ್ನು ಕೇಳಲು ಯಾರೂ ಸಿದ್ಧರಿಲ್ಲ, ಉತ್ತರದ ರೈತರಂತೆ ಇಲ್ಲಿ ಹೋರಾಡುವವರೂ ಇಲ್ಲ

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next