ನವದೆಹಲಿ:ದೇಶದಲ್ಲಿ ಕೋವಿಡ್ ಸೋಂಕಿನ 3ನೇ ಅಲೆ ಗಣನೀಯ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದರೆ ದೇಶಾದ್ಯಂತ ಜೂನ್ (22ನೇ ತಾರೀಕು)ತಿಂಗಳಿನಲ್ಲಿ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇದ್ದಿರುವುದಾಗಿ ಕಾನ್ಪುರ್ ಐಐಟಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹುಂಡಿ ಎಣಿಕೆ: 28 ದಿನಗಳಲ್ಲಿ 9.92 ಲಕ್ಷ ರೂ ಸಂಗ್ರಹ
ಕಾನ್ಪುರ್ ಐಐಟಿ ಸಂಶೋಧಕರ ಪ್ರಕಾರ, ಜೂನ್ ತಿಂಗಳ ಅಂತ್ಯದಲ್ಲಿ ಭಾರತ ಕೋವಿಡ್ 19 ಸೋಂಕಿನ 4ನೇ ಅಲೆಗೆ ಸಾಕ್ಷಿಯಾಗಬಹುದು. ಅಲ್ಲದೇ ಇದು ನಾಲ್ಕು ತಿಂಗಳ ಬಳಿಕ ಕೋವಿಡ್ ಸೋಂಕು ಮತ್ತೆ ತನ್ನ ಪ್ರಭಾವ ತೋರಿಸಲಿದೆ ತಿಳಿಸಿದ್ದಾರೆ.
4ನೇ ಅಲೆಯಲ್ಲಿ ಕೋವಿಡ್ 19 ಸೋಂಕಿನ ತೀವ್ರತೆಯ ಪ್ರಮಾಣ ಎಷ್ಟಿದೆ ಎಂಬುದನ್ನು ಹೊಸ ತಳಿಯ ಸೋಂಕು ಪ್ರಾರಂಭವಾದ ನಂತರ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಲಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಈಗಾಗಲೇ ಕೋವಿಡ್ ಲಸಿಕೆ ಮತ್ತು ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ಮುತುವರ್ಜಿ ವಹಿಸುವ ಮೂಲಕ ಕೋವಿಡ್ ಬೂಸ್ಟರ್ ಡೋಸ್ ನೀಡುವ ಸಿದ್ಧತೆ ನಡೆಸಿದೆ.
ಭಾರತದಲ್ಲಿ 2020ರ ಜನವರಿ 30ರಂದು ಆರಂಭಿಕ ಹಂತದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಅಂಕಿಅಂಶಗಳನ್ನು ಪರಿಗಣಿಸಿ 936 ದಿನಗಳ ಬಳಿಕ ದೇಶದಲ್ಲಿ ನಾಲ್ಕನೇ ಅಲೆಯ ಕೋವಿಡ್ ಸೋಂಕು ಬರಲಿದೆ ಎಂದು ಸಂಶೋಧಕರ ಅಂಕಿಅಂಶ ತಿಳಿಸಿದೆ.