Advertisement

ಪಾಕ್ ಆಟ ಡ್ರಾನತ್ತ.. ಆ್ಯಂಡರ್ಸನ್ ಚಿತ್ತ 600ನೇ ವಿಕೆಟ್ ನತ್ತ!

08:04 AM Aug 25, 2020 | keerthan |

ಸೌಥಂಪ್ಟನ್: ಇಂಗ್ಲೆಂಡ್ ಬೇಸಿಗೆಯ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನ ಕುತೂಹಲಕಾರಿ ಘಟಕ್ಕೆ ತಲುಪಿದೆ. ಇಂಗ್ಲೆಂಡ್ ವಿಧಿಸಿದ ಫಾಲೋ ಆನ್ ಅನ್ಮು ನಿಭಾಯಿಸಿಕೊಂಡು ಆಡುತ್ತಿರುವ ಪಾಕ್ ಮಳೆಯ ಸಹಾಯದಿಂದ ಪಂದ್ಯ ಡ್ರಾ ಮಾಡುವ ಯೋಜನೆಯಲ್ಲಿದೆ.

Advertisement

ಫಾಲೋ ಆನ್ ಪಡೆದು ಮತ್ತೆ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ಥಾನ ನಾಲ್ಕನೇ ದಿನ ಭರ್ತಿ ನೂರು ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ಮಳೆಯಿಂದ ಸುಮಾರು 40 ಓವರ್ ಗಳ ಪಂದ್ಯ ನಷ್ಟವಾಯಿತು.

ಶಾನ್ ಮಸೂದ್ 18 ರನ್ ಗಳಿಸಿದರೆ, ಅಬಿದ್ ಅಲಿ 42 ರನ್ ಗಳಿಸಿ ಔಟಾಗಿದ್ದಾರೆ. ನಾಯಕ ಅಜರ್ ಅಲಿ 29 ರನ್ ಮತ್ತು ಬಾಬರ್ ಅಜಂ ನಾಲ್ಕು ರನ್ ಗಳಿಸಿ ಆಡುತ್ತಿದ್ದಾರೆ.

ಆ್ಯಂಡರ್ಸನ್ ಗೆ ಭೇಕು ಒಂದು ವಿಕೆಟ್: ಇಂಗ್ಲೆಂಡ್ ನ ಹಿರಿಯ ವೇಗಿ ಟೆಸ್ಟ್ ಕ್ರಿಕೆಟ್ ನಲ್ಲಿ 599 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಂದು ಮಳೆ ಕಾಟ ಇಲ್ಲದೇ ಹೋದರೆ ಸೌಥಂಪ್ಟನ್ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next