Advertisement

Isrel ಯುದ್ಧ ಭೂಮಿಯಲ್ಲಿ ಸಿಲುಕಿದ ಉತ್ತರ ಕನ್ನಡದ ನಾಲ್ವರು ಯುವಕರು ಸುರಕ್ಷಿತ

09:33 PM Oct 09, 2023 | Team Udayavani |

ಕಾರವಾರ : ಯುದ್ಧಪೀಡಿತ ಇಸ್ರೇಲ್ ದೇಶದಲ್ಲಿ ಉತ್ತರ ಕನ್ನಡದ ನಾಲ್ವರು ಯುವಕರು ಉದ್ಯೋಗ ಅರಸಿ ಹೋಗಿದ್ದು, ಅವರೀಗ ಭಾರತೀಯ ರಾಯಭಾರ ಕಚೇರಿಯ ಸಂಪರ್ಕಕ್ಕೆ ಬರುತ್ತಿದ್ದಾರೆ. ಇಸ್ರೇಲ್ ಯುದ್ಧ ಘೋಷಣೆ ಮಾಡುತಿದ್ದಂತೆ ಭಾರತದ ರಾಯಭಾರಿ ಕಚೇರಿ ಸಹ ಇಸ್ರೇಲ್ ನಲ್ಲಿ ಇರುವ ಭಾರತೀಯರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ನಾಲ್ವರು ಯುವಕರು ಯುದ್ಧಪೀಡಿತ ಇಸ್ರೆಲ್ ನಲ್ಲಿ ಸಿಲುಕಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ.ಜಿಲ್ಲೆಯ ಶಿರಸಿಯ ಇಬ್ಬರು ಯುವಕರು, ಯಲ್ಲಾಪುರದ ಓರ್ವ ಯುವಕ ,ಹೊನ್ನಾವರದ ಕವಲಕ್ಕಿಯ ಜೇಮ್ಸ್ ಎಂಬ ಯುವಕ ಇಸ್ರೇಲ್ ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೀಗ ಹೊರಬಂದಿದೆ. ಜಿಲ್ಲಾಡಳಿತ ಸಹ ಮಾಹಿತಿ ನೀಡುವಂತೆ ಜಿಲ್ಲೆಯ ಜನತೆಯನ್ನು ಕೋರಿದೆ.

ಶಿರಸಿ ನಗರದ ಮೀನುಮಾರುಕಟ್ಟೆಯ ನಿವಾಸಿಯಾಗಿರುವ ಕ್ರಿಸೊಸ್ಟೆಮ್ ಪಾಲ್ ವಾಜ್ ಇಸ್ರೇಲ್ ನ ಹೈಫಾ ಗ್ರಾಮದಲ್ಲಿ ಹೋಮ್ ನರ್ಸ್ ಆಗಿ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತಿದ್ದು, ಇದೀಗ ಅವರು ಇಸ್ರೇಲ್ ನ ಯುದ್ಧ ಪೀಡಿತ ಸ್ಥಳದಿಂದ 150 ಕಿಲೋಮೀಟರ್ ದೂರದಲ್ಲಿದ್ದಾರೆ. ಹಾಗೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಶಿರಸಿಯ ಮತ್ತೋರ್ವ ಯುವಕ ವಿಲ್ಸನ್ ಡಯಾಸ್ ಎಂಬುವವರು ಹೋಮ್ ನರ್ಸಿಂಗ್ ಉದ್ಯೋಗ ಮಾಡುತ್ತಿದ್ದು, ಇಸ್ರೇಲ್ ನ ಪೇಟಾ ಟಿಕ್ವಾ ದಲ್ಲಿ ಸಿಲುಕಿದ್ದಾರೆ. ಹೊನ್ನಾವರದ ಕವಲಕ್ಕಿ ಗ್ರಾಮದ ಯುವಕ ಜೇಮ್ಸ್ ಸಹ ಇಸ್ರೇಲ್ ನಲ್ಲಿ ಸಿಲುಕಿದ್ದು ಇವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಯಲ್ಲಾಪುರದ ಯುವಕನ ಹೆಸರು ಇನ್ನು ತಿಳಿದು ಬಂದಿಲ್ಲ.

ಇಸ್ರೇಲ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಯುವಕರು ಸಿಲುಕಿದ್ದು ಇವರ ಮಾಹಿತಿಯನ್ನು ಪೋಷಕರು ಜಿಲ್ಲಾಡಳಿತಕ್ಕೆ ಇನ್ನಷ್ಟೇ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next