Advertisement

ಕುಂಭಮೇಳಕ್ಕೆ ನಾಲ್ಕು ತಾತ್ಕಾಲಿಕ ಬಸ್‌ ನಿಲ್ದಾಣ

01:13 AM Feb 15, 2019 | Team Udayavani |

ಮೈಸೂರು: ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಫೆ.17ರಿಂದ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಲು ಆಗಮಿಸುತ್ತಿದ್ದು, ಸುಗಮ ಸಂಚಾರಕ್ಕಾಗಿ ನಾಲ್ಕು ತಾತ್ಕಾಲಿಕ ನಿಲುಗಡೆ ತಾಣಗಳನ್ನು ಸ್ಥಾಪಿಸಲಾಗಿದೆ. ಭಕ್ತರ ಸಂಚಾರಕ್ಕಾಗಿ ಉಚಿತ ಮಿನಿಬಸ್‌ ವ್ಯವಸ್ಥೆಮಾಡಲಾಗಿದೆ. ಮೈಸೂರು ಕಡೆಯಿಂದ ಬರುವ ಭಕ್ತರು ಗಗೇìಶ್ವರಿಯಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸೇತುವೆ ಪಕ್ಕದ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ವಾಪಸ್‌ ಅಲ್ಲಿಂದ ಮೈಸೂರು ಕಡೆಗೆ ಸಂಚರಿಸುವುದು.

Advertisement

ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ತೆರಳಬಹುದಾಗಿದೆ. ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರುನಿಂದ ಬರುವ ಭಕ್ತರು ತಮ್ಮ ವಾಹನ ಗಳನ್ನು ಕಾವೇರಿ ನದಿ ಹಳೇ ಸೇತುವೆ ಬಳಿ ತಾತ್ಕಾಲಿಕ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ನಂತರ ಬನ್ನೂರು ಕಡೆಗೆ ವಾಪಸ್ಸಾಗುವುದು. ನಂಜನಗೂಡು, ತಿ.ನರಸೀಪುರ ಪಟ್ಟಣದ ಕಡೆಯಿಂದ ಬರುವ ಭಕ್ತರು ಉತ್ತಮ ವಾಹನಗಳನ್ನು ತಿರುಮಕೂಡಲು ಸೇತುವೆ ಬಳಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next