ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರೆಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಾಗಲ್ ಕಡಲ ತೀರದಲ್ಲಿ ಶನಿವಾರ ( ಜೂ.25 ರಂದು) ನಡೆದಿದೆ.
ಅರ್ಜುನ್ ಹಾಗೂ ಚೈತ್ರಶ್ರೀ ಮೃತ ದೇಹ ಪತ್ತೆಯಾಗಿದ್ದು, ತೇಜಸ್ ಡಿ., ಕಿರಣ್ ಕುಮಾರ್ ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ 87 ಮಂದಿ ವಿದ್ಯಾರ್ಥಿಗಳಲ್ಲಿ ಕೆಲವರು ಸಿಲ್ವರ್ ಸ್ಯಾಂಡ್ ರೆಸಾರ್ಟ್ ನ ಬಳಿಯಿರುವ ಕಾಗಲ್ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು. ಈ ವೇಳೆ ನಾಲ್ವರು ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಸ್ಥಳೀಯರೊಂದಿಗೆ ಶೋಧಕಾರ್ಯ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.