Advertisement

ಮೇ 6ಕ್ಕೆ ನಾಲ್ಕು ಚಿತ್ರಗಳು ತೆರೆಗೆ

03:12 PM May 05, 2022 | Team Udayavani |

ಸದ್ಯ ಮೇ ಮೊದಲ ಶುಕ್ರವಾರ (ಮೇ. 6) ಕನ್ನಡದಲ್ಲಿ ನಾಲ್ಕು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿ ಕೊಂಡಿವೆ. ಮನೋಜ್‌ ಕುಮಾರ್‌, ರಂಜನಿ ರಾಘವನ್‌ ಅಭಿನಯದ ಸಸ್ಪೆನ್ಸ್‌ ಕಂ ಸೈಬರ್‌ ಕ್ರೈಂ ಕಥಾಹಂದರ ಹೊಂದಿರುವ “ಟಕ್ಕರ್‌’ ಮೇ ಮೊದಲ ವಾರ ತೆರೆಗೆ ಬರುತ್ತಿದೆ.

Advertisement

ಈಗಾಗಲೇ ಎರಡು ಬಾರಿ ತನ್ನ ಬಿಡುಗಡೆಯನ್ನು ಮುಂದೂಡಿಕೊಂಡಿದ್ದ ನಟ ಶರಣ್‌, ಆಶಿಕಾ ರಂಗನಾಥ್‌ ಜೋಡಿಯಾಗಿ ಅಭಿನಯಿಸಿರುವ “ಅವತಾರ್‌ ಪುರುಷ’ ಕೂಡ ಮೇ ಮೊದಲ ವಾರ ತೆರೆಗೆ ಬರುತ್ತಿದೆ.

ಉಳಿದಂತೆ ಅಪೂರ್ವ ನಾಯಕಿಯಾಗಿರುವ ಜಿಮ್‌ ರವಿ ನಟನೆ ಮತ್ತು ನಿರ್ಮಾಣದ “ಪುರುಷೋತ್ತಮ’ ಚಿತ್ರ ಕೂಡ ಮೇ ಮೊದಲ ವಾರ ತೆರೆಗೆ ಬರುವ ಯೋಚನೆಯಲ್ಲಿದೆ. ಇದಲ್ಲದೆ, ಹೊಸ ಪ್ರತಿಭೆ ಗಂಗಾಧರ ಬಡಿಗೇರ, ಶೋಭರಾಜ್‌, ವೈಜನಾಥ್‌ ಬಿರಾದಾರ್‌, ಅಂಜನಪ್ಪ, ರಥಸಪ್ತಮಿ ಅರವಿಂದ್‌ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ನೆನಪಾಗುತ್ತಿಲ್ಲ’ ಚಿತ್ರ ಕೂಡ ತೆರೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next