ಕೊಲ್ಲೂರು:-ಚಿತ್ತೂರು ಗ್ರಾಮದ ಮುಖ್ಯ ರಸ್ತೆಯ ಹಾರ್ಮಣ್ಣು ಬಳಿ ಮಾ.13 ರಂದು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಮಗುಚಿ ಬಿದ್ದು, ನಾಲ್ಕು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
Advertisement
ಚಿತ್ತೂರು ಕಡೆಯಿಂದ ಜಡ್ಕಲ್ ಗೆ ಸಾಗುತ್ತಿದ್ದ, ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಜಡ್ಕಲ್ ಗ್ರಾಮದ ಕಾರಿನ ಚಾಲಕ ಪೌಲೋಸ್(48) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶೆಲ್ಬಿ, ಬಾಲಕಿ ಶ್ರೇಯ ಹಾಗೂ ಬಾಲಕ ಅಭೀನ್ ಜಾನ್ ಗಂಭೀರ ಗಾಯಗೊಂಡರು. ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊಲ್ಲೂರು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.