Advertisement

ಕಡಲೂರು: ಸಿಮೆಂಟ್‌ ಲಾರಿಗೆ ಕಾರು ಢಿಕ್ಕಿ: ಮಹಿಳೆ ಸಹಿತ ನಾಲ್ವರ ಸಾವು

03:00 PM Jan 13, 2017 | Team Udayavani |

ಕಡಲೂರು : ಸಿಮೆಂಟ್‌ ಸಾಗಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸಹಿತ ನಾಲ್ವರು ಮೃತಪಟ್ಟ ಘಟನೆ ಇಂದಿಲ್ಲಿ  ನಡೆದಿದೆ.

Advertisement

ಈ ಪ್ರದೇಶದಲ್ಲಿ ಬೆಳಗ್ಗೆ ದಟ್ಟನೆಯ ಮಂಜು ಮುಸಕಿದ್ದು ಗೋಚರತೆ ಅತ್ಯಂತ ಕಡಿಮೆ ಇದ್ದುದೇ ಈ ಅಪಘಾತಕ್ಕೆ ಕಾರಣವೆಂದು ತಿಳಿಯಲಾಗಿದೆ. 

ನಾಗೋರ್‌ ಕಡೆಗೆ ಹೋಗುತ್ತಿದ್ದ ಕಾರು ಪೆರಿಯಕಂಗಣಂ ಕುಪ್ಪಂ ಎಂಬ ಗ್ರಾಮದಲ್ಲಿ ಲಾರಿಗೆ ಢಿಕ್ಕಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next