Advertisement

ವಿವಿಧ ಕಡೆ ನಾಲ್ಕು ಶಿಲಾಶಾಸನಗಳು ಪತ್ತೆ

04:00 PM Aug 03, 2022 | Team Udayavani |

ಮಸ್ಕಿ: ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ|ಚನ್ನಬಸಪ್ಪ ಮಲ್ಕಂದಿನ್ನಿ ಅವರು ಪಟ್ಟಣದಲ್ಲಿ ವಿವಿಧ ಕಡೆ ನಾಲ್ಕು ಶಿಲಾಶಾಸನಗಳು ಪತ್ತೆ ಮಾಡಿದ್ದಾರೆ.

Advertisement

ಮೊದಲನೇ ಶಿಲ್ಪ ಬಸನಗೌಡ ಪೊಲೀಸ್‌ ಪಾಟೀಲ್‌ ಮನೆ ಆವರಣದಲ್ಲಿ (ಪರಾಪೂರ ರಸ್ತೆ) ಕಣಶಿಲೆಯಲ್ಲಿ ರಚಿತಗೊಂಡ ಚತುರ್ಮುಖ ತೀರ್ಥಂಕರನ ವಿಗ್ರಹ ಪತ್ತೆಯಾಗಿದ್ದು, ಇದು ಕ್ರಿ.ಶ. 11-12ನೇ ಶತಮಾನಕ್ಕೆ ಸೇರಿದ ವಿಗ್ರಹವಾಗಿದೆ. ನಾಲ್ಕು ಕಡೆ ಕುಳಿತ ಭಂಗಿಯ ತೀರ್ಥಂಕರರ ವಿಗ್ರಹಗಳು ಇಲ್ಲಿವೆ.

ಎರಡನೇ ತೀರ್ಥಂಕರನ ಶಿಲ್ಪ ಪಟ್ಟಣದ ಹೊಸ ಬಸ್‌ನಿಲ್ದಾಣ ಹತ್ತಿರ (ಪೂರ್ವ) ಕಿರಣ ಮುರಾರಿ ಅವರ ಮನೆ ಮುಂದೆ ಪತ್ತೆಯಾಗಿದ್ದು, ಇದು 16 ಇಂಚು ಎತ್ತರ 15 ಇಂಚು ಅಗಲವಿದೆ. ಮೂರನೇ ಶಿಲ್ಪ ಬೊಲ್ಲ ಕುದುರೆಯ ಶಿಲ್ಪವಾಗಿದ್ದು, ಇದು ಕಣ ಶಿಲೆಯ ಚಪ್ಪಡಿ ಕಲ್ಲಿನ ಎರಡು ಬದಿಯಲ್ಲಿ ರಚಿತಗೊಂಡಿದೆ. ಇಲ್ಲಿ ಕುದುರೆ ಓಡುವ ಭಂಗಿಯಲ್ಲಿ ಕಂಡು ಬರುತ್ತವೆ. ನಾಲ್ಕನೇ ಶಿಲ್ಪ ಶಿಬಾರ ಕಲ್ಲಾಗಿದ್ದು, ಇದು ಪಟ್ಟಣದ ಎಸ್‌ಡಿಎಂಸಿ ಸ್ಕೂಲ್‌ ಹತ್ತಿರದ ಬೆಟ್ಟದ ದೊಡ್ಡ ಕಣ ಶಿಲೆಯ ಗುಂಡಿಗೆ ಖಂಡರಿಸಿದ್ದಾರೆ. ಇದು ದೇವಸ್ಥಾನದ ದ್ವಾರ ಮಂಟಪದ ಮಾದರಿಯಲ್ಲಿದ್ದು ಇದರ ಮೇಲ್ಬದಿಯಲ್ಲಿ ಸೂರ್ಯ, ತ್ರಿಶೂಲ, ಚಂದ್ರರ ಶಿಲ್ಪಗಳಿವೆ. ಹಾಗೆಯೇ ಇದರ ಒಳಬದಿಯಲ್ಲಿ ಖಡ್ಗ ಹಿಡಿದುಕೊಂಡ ವೀರ, ಎಡಬದಿಯಲ್ಲಿ ಮಹಿಳೆ ಇದ್ದಾಳೆ. ಎರಡೂ ಶಿಲ್ಪಗಳು ಕುಳಿತ ಭಂಗಿಯಲ್ಲಿವೆ. ಈ ಶಿಲ್ಪಶೈಲಿಯ ಆಧಾರದಿಂದ ಇದು ಕ್ರಿ.ಶ. ಸುಮಾರು 17-18ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಚನ್ನಬಸಪ್ಪ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next