Advertisement
ಮುಂದಿನ ವರ್ಷದಲ್ಲಿ ಹರ್ಯಾಣದಲ್ಲಿ ನಡೆಯಲಿರುವ “ಖೇಲೋ ಇಂಡಿಯಾ ಯೂತ್ ಗೇಮ್ಸ್’ನಲ್ಲಿ ಈ ಸ್ಥಳೀಯ ಕ್ರೀಡೆಗಳನ್ನು ಕಾಣಬಹುದಾಗಿದೆ. ಕರ್ನಾಟಕದ ಮಲ್ಲಕಂಬ, ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕ ಹಾಗೂ ಮಣಿಪುರದ ಥಾಂಗ್-ತಾ ಕ್ರೀಡೆಗಳು ಖೇಲೋ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದೆ.
ಕ್ರೀಡಾ ಸಚಿವ ಕಿರಣ್ ರಿಜಿಜು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಭಾರತ ಸ್ಥಳೀಯ ಕ್ರೀಡೆಗಳ ಸಮೃದ್ಧವಾದ ಸಂಸ್ಕೃತಿಯನ್ನು ಹೊಂದಿದೆ. ಇಂಥ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಮುಂದಿನ ಪೀಳಿಗೆಗೆ ತಲುಸಿಸಬೇಕು ಈಗಾಗಲೇ ಕೆಲವು ಸ್ಥಳಿಯ ಕ್ರೀಡೆಗಳು ಕಣ್ಮರೆಯಾಗಿದೆ. ಇನ್ನುಳಿದ ಕೆಲವು ಕ್ರೀಡೆಗಳನ್ನಾದರೂ ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು. ಈ ಕ್ರೀಡೆಗಳಲ್ಲಿನ ಸ್ಪರ್ಧಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ವಿಶ್ವಕ್ಕೆ ತೋರಿಸಲು ಖೇಲೋ ಇಂಡಿಯಾ ಗೇಮ್ಸ್‌ಗಿಂತ ಉತ್ತಮ ವೇದಿಕೆ ದೊರೆಯದು. ಅದರಂತೆ 2021ರ ಖೇಲೋ ಇಂಡಿಯಾ ಕೂಟದಲ್ಲಿ ಯೋಗಾಸನದ ಜತೆಗೆ ಈ ನಾಲ್ಕು ಕ್ರೀಡೆಗಳು ಎಲ್ಲರ ಗಮನ ಸೆಳೆಯಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.