ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಒಪ್ಪೊತ್ತಿನ ಊಟಕ್ಕೂ ಹಾಹಾಕಾರ ಎದುರಾಗಿದ್ದು,ಉಚಿತ ಗೋಧಿ ಹಿಟ್ಟು ಪಡೆದುಕೊಳ್ಳಲು ನುಗ್ಗಿದ ಜನಸಂದಣಿಯಲ್ಲಿ ಕಾಲು¤ಳಿತ ಸಂಭವಿಸಿ, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಲ್ತಾನ್, ಮುಜಾಫರ್‌ನಗರ್, ಫೈಸಲಾಬಾದ್ ನಗರಗಳಲ್ಲಿ ಬಡಜನರಿಗೆ ಸರ್ಕಾರ ವಿತರಿಸುತ್ತಿರುವ ಗೋಧಿ ಹಿಟ್ಟು ಪಡೆದುಕೊಳ್ಳಲು ಭಾರೀ ಜನಸಂದಣಿ ಸೇರಿದೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಬೇಸತ್ತ ಜನರು ಉಚಿತ ಹಿಟ್ಟು ಪಡೆಯಲು ಮುಗಿಬಿದ್ದ ಕಾರಣ, ಕಳೆದ ಕೆಲ ದಿನಗಳಿಂದ ಕಾಲು¤ಳಿತ ಪ್ರಕರಣಗಳು ಸಂಭವಿಸುತ್ತಿದೆ. ಘಟನೆಗಳಲ್ಲಿ ನಾಲ್ವರು ವೃದ್ಧರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದೈವನಿಂದನೆಗೆ ಗಲ್ಲು:
ಮತ್ತೂಂದೆಡೆ, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ದೈವನಿಂದನೆ ಮಾಡಿರುವ ಪ್ರಕರಣ ಸಂಬಂಧಿಸಿದಂತೆ ಪಾಕಿಸ್ತಾನ ಪೇಶಾವರದಲ್ಲಿ ಭಯೋತ್ಪಾದ ನಿಗ್ರಹ ನ್ಯಾಯಾಲಯವು ಮರ್ದಾನ್ ಪ್ರಾಂತ್ಯದ ನಿವಾಸಿ ಸಯ್ಯದ್ ಮೊಹಮ್ಮದ್ ಸೀಶಾನ್ ಎಂಬಾತನಿಗೆ ಗಲ್ಲು ಶಿಕ್ಷೆ ನೀಡಿದೆ.