Advertisement

ಹಿರಿಯೂರಿನಲ್ಲಿ ಭೀಕರ ಅಪಘಾತ : 3 ಮಹಿಳೆಯರು ಸೇರಿ ನಾಲ್ವರು ಬಲಿ  

03:10 PM May 28, 2017 | Team Udayavani |

ಹಿರಿಯೂರು : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 150(ಎ) ಯ ಗೋರ್ಲತ್ತು ಎಂಬಲ್ಲಿ  ಭಾನುವಾರ ಲಾರಿ ಮತ್ತು ಸ್ವಿಫ್ಟ್ ಕಾರು ಮುಖಾಮುಖೀ ಢಿಕ್ಕಿಯಾದ ಸಂಭವಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

ಅಪಘಾತದ ತೀವ್ರತೆಗೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ವೇತಾ ದೇಸಾಯಿ, ದೊಡ್ಡಪ್ಪ ದೇಸಾಯಿ, ಭಾಗ್ಯಮ್ಮ ಮತ್ತು ಸುವರ್ಣಮ್ಮ ಎನ್ನುವವರು ಸಾವನ್ನಪ್ಪಿದ್ದಾರೆ.

ಹಿರಿಯೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next