Advertisement
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ ಹುದ್ದೆ ಸೃಷ್ಟಿಯಾಗಿದ್ದು 1994ರಲ್ಲಿ. ಎಂ.ವೀರಪ್ಪ ಮೊಲಿ ಹಾಗೂ ಎಸ್.ಎಂ.ಕೃಷ್ಣ ನಡುವೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದರಿಂದ ಮೊಲಿ ಸಿಎಂ, ಎಸ್.ಎಂ.ಕೃಷ್ಣ ಉಪ ಮುಖ್ಯಮಂತ್ರಿಯಾದರು. ಅನಂತರ 1999 ರಿಂದ 2004ರ ವರೆಗೂ ಕೃಷ್ಣ ಅವರು ಸಿಎಂ ಆಗಿ ರಾಜ್ಯಭಾರ ನಡೆಸಿದರು.ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ (1994 ರಿಂದ 1996) ಆಗಿದ್ದ ಜೆ.ಎಚ್.ಪಟೇಲ್ ಅವರು, ದೇವೇಗೌಡರು ಪ್ರಧಾನಿಯಾದ ಬಳಿಕ ಅವರು 1996 ರಿಂದ 1999ರ ವರೆಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು.
Related Articles
Advertisement
2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ವಿಪಕ್ಷ ನಾಯಕರಾಗಿದ್ದ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ 2018ರ ವರೆಗೆ ಆಡಳಿತ ನಡೆಸಿದರು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ| ಜಿ.ಪರಮೇಶ್ವರ್ ಚುನಾವಣೆ ಯಲ್ಲಿ ಸೋತಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಲು ಅವಕಾಶ ದೊರೆಯಿತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿಸಿ ಎಂ ಹುದ್ದೆ ಸೃಷ್ಟಿಯ ಬೇಡಿಕೆ ಇತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಸಿದ್ದರಾಮಯ್ಯ 2ನೇ ಬಾರಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಿ ನೇಮಕಗೊಂಡಿದ್ದಾರೆ.
ಈ ನಡುವೆ, ಬಿಜೆಪಿ ವಿಚಾರಕ್ಕೆ ಬಂದರೆ ಬಿ.ಎಸ್. ಯಡಿಯೂರಪ್ಪ ಅವರು, ಎಚ್.ಡಿ. ಕುಮಾರ ಸ್ವಾಮಿ ಸಂಪುಟದಲ್ಲಿ (2006- 2007) ಡಿಸಿ ಎಂ ಆಗಿದ್ದರು. ಅನಂತರ ಬಿ.ಎಸ್. ಯಡಿಯೂರಪ್ಪ 2007ರ ನವೆಂಬರ್ 12ರಿಂದ ನ.19ರ ವರೆಗೆ 7 ದಿನ ಸಿಎಂ ಹಾಗೂ 2008 ರ ಮೇ ನಿಂದ 2011ರ ಆಗಸ್ಟ್‌ವರೆಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಮತ್ತೆ ಯಡಿಯೂರಪ್ಪ ಅವರು 2018ರ ಮೇ 17 ರಿಂದ ಮೇ 23ರ ವರೆಗೆ ಅಂದರೆ 6 ದಿನ ಸಿಎಂ ಆಗಿದ್ದರು. ಆದರೆ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಮೂಲಕ 2019ರಿಂದ 2021ರ ವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.
ಈ ನಡುವೆ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಡಾ| ಜಿ. ಪರಮೇಶ್ವರ್ ಅವರು ಡಿಸಿಎಂ ಆಗಿ ಸೇವೆ ಸಲ್ಲಿಸಿದರು. ಆದರೆ ಇವರಿಗೆ ಸಿಎಂ ಯೋಗ ಲಭಿಸಿಲ್ಲ.