ಮಂಗಳೂರು : ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಕ್ರಿಟನ್ ಕುಶಾಲ್ ಅಪಾರ್ಟ್ ಮೆಂಟ್ ನಿಂದ ಈ ಮಕ್ಕಳು ಕಾಣೆಯಾಗಿದ್ದರು.
ಸದ್ಯ ಮಂಗಳೂರಿನಲ್ಲಿ ಪತ್ತೆಯಾಗಿರುವ ಮಕ್ಕಳನ್ನು ಅಮೃತವರ್ಷಿಣಿ, ಭೂಮಿ, ಚೇತನ್, ರಾಯನ್ ಎಂದು ಪಾಂಡೇಶ್ವರ ಪೊಲೀಸರು ಖಚಿತ ಪಡಿಸಿದ್ದಾರೆ. ಇನ್ನು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ನಗರದಲ್ಲಿದ್ದ ಮಕ್ಕಳನ್ನು ರಿಕ್ಷಾ ಚಾಲಕರು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಈ ಮಕ್ಕಳು ಕಾಣೆಯಾಗಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರು ವಿಶೇಷ ತಂಡ ರಚನೆ ಮಾಡಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು. ಇದೇ ಹಿನ್ನೆಲೆಯಲ್ಲಿ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಈ ನಾಲ್ವರು ಮಕ್ಕಳು ಬೆಂಗಳೂರಿನಿಂದ ಮಂಗಳೂರಿಗೆ ಬಸ್ ನಲ್ಲಿ ಬಂದಿದ್ದರು. ಹಾಸ್ಟೆಲ್ ಗೆ ಹಾಕ್ತಾರೆ, ನಾವು ಹಳ್ಳಿಯಲ್ಲೇ ಓದೋಣ ಎಂದು ತಿರ್ಮಾನಿಸಿದ ಮಕ್ಕಳು ಈ ನಿರ್ಧಾರಕ್ಕೆ ಬಂದಿದ್ದರು. ತಮ್ಮೊಂದಿಗೆ ಹಣ ಕೂಡ ತಂದಿದ್ದರು. ಮೈ ಮೇಲಿದ್ದ ಚಿನ್ನವನ್ನು ಪ್ಯಾಕ್ ಮಾಡಿ ಮಂಗಳೂರು ಬಸ್ ನಿಲ್ದಾಣದ ಡಸ್ಟ್ ಬಿನ್ ಗೆ ಎಸೆದಿದ್ದರು. ಅದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ
ಬೆಂಗಳೂರಿನಿಂದ ಹಾವೇರಿ, ಮೈಸೂರು, ಅರಸೀಕೆರೆಗೆ ರೈಲಿನಲ್ಲಿ ತೆರಳಿ, ಅನಂತರ ಬೆಂಗಳೂರಿಗೆ ವಾಪಸಾಗಿ ಅಲ್ಲಿಂದ ಮಂಗಳೂರಿಗೆ ಬಂದಿರುವುದಾಗಿ ಪೊಲಿಸರಿಗೆ ಹೇಳಿಕೆ ನಿಡಿದ್ದಾರೆ