ಚಿತ್ರದುರ್ಗ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತ್ಯಾಗ ಬಲಿದಾನ ಮಾಡಿರುವ ಹಿನ್ನೆಲೆ ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅದಕ್ಕೆಸರಿಯಾದ ತಿರುಗೇಟು ನೀಡುವವರು ಕಾಂಗ್ರೆಸ್‌ಪಕ್ಷದಲ್ಲಿ ಇಲ್ಲದಿರುವುದು ದುರಂತ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರನಡೆದ 135ನೇ ಕಾಂಗ್ರೆಸ್ ಸಂಸ್ಥಾಪನಾದಿನಾಚರಣೆಯಲ್ಲಿ ಭಾರತ ಸಂವಿಧಾನ ಪೀಠಿಕೆ ಓದಿದ ಅವರು, 56 ವರ್ಷಗಳ ಕಾಲದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹಾಗೂ ನಾಯಕರವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿರುವ ಬಿಜೆಪಿಯಿಂದ ಈದೇಶಕ್ಕೆ ಯಾವ ಕೊಡುಗೆಯೂ ಸಿಕ್ಕಿಲ್ಲ. ಈ ಸತ್ಯವನ್ನು ಕಾಂಗ್ರೆಸ್‌ನವರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸತ್ಯಹರೀಶ್ಚಂದ್ರರೇಎಂದು ಪ್ರಶ್ನಿಸಿದ ಹನುಮಂತಪ್ಪ, ಎಲ್ಲಾ ಪಕ್ಷಗಳಲ್ಲೂಕೆಟ್ಟವರು ಇರುತ್ತಾರೆ. ವೈಚಾರಿಕತೆ, ನಂಬಿಕೆ,ಅಭಿವ್ಯಕ್ತಿ, ಧರ್ಮ ಪಾಲನೆ ವ್ಯಕ್ತಿಗತ ವಿಚಾರಗಳು.ರಾಜ್ಯಾಂಗದಲ್ಲಿ ಎಲ್ಲರಿಗೂ ಸಮಾನತೆಯಿದೆ.ಲವ್ ಜಿಹಾದ್, ರಾಮಮಂದಿರ ವಿವಾದವನ್ನುಮುಂದಿಟ್ಟುಕೊಂಡು ಜಾತಿ-ಧರ್ಮಗಳ ನಡುವೆದ್ವೇಷ ಹುಟ್ಟು ಹಾಕುತ್ತಿರುವ ಬಿಜೆಪಿಯವರ ವಿರುದ್ಧ ಏಕೆ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ. ಭಾರತವನ್ನು ಒಗ್ಗೂಡಿಸುವಲ್ಲಿ ಮುಸ್ಲಿಮರ ಪಾತ್ರವೂ ಇದೆ ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಎಲ್ಲರಿಗೂ ಮತದಾನದ ಅವಕಾಶ ಕಲ್ಪಿಸಿದ್ದಾರೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಮತಗಳನ್ನು ಮಾರಿಕೊಂಡಿರುವುದು ನೋವಿನ ಸಂಗತಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಿಜೆಪಿ ಇನ್ನೂಹುಟ್ಟಿರಲಿಲ್ಲ. ರಾಜ್ಯಾಂಗದ ಮೇಲೆ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸುತ್ತಿರುವವರು ಈಗ ಅದರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
34 ವರ್ಷಗಳ ಕಾಲ ಗಾಂಧಿ ಮನೆತನ ಅಧಿಕಾರ ನಡೆಸಿ ಭಾರತದ ಚಿತ್ರಣವನ್ನು ಬದಲಾಯಿಸಿದೆ. ದೇಶಕ್ಕೆ ಬಡತನವಿದ್ದಾಗ ಆಹಾರ ನೀಡಿದ್ದು, ತಂತ್ರಜ್ಞಾನದಲ್ಲಿ ದೇಶವನ್ನು ಅಭಿವೃದ್ಧಿಯತ್ತಕೊಂಡೊಯ್ದವರು ರಾಜೀವ್ ಗಾಂಧಿ. ನೆಹರು ಅನೇಕ ಯೋಜನೆಗಳನ್ನು ಜಾರಿಗೆ ತಂದರು. 46ರಾಷ್ಟ್ರಗಳಿಗೆ ಪ್ರವಾಸ ಮಾಡಿರುವ ಪ್ರಧಾನಿ ಮೋದಿ ಸರ್ವಾಧಿ ಕಾರಿಯಂತೆ ವರ್ತಿಸುತ್ತಿದ್ದಾರೆ. ಏಳು ತಿಂಗಳು ಕ್ಯಾಬಿನೆಟ್ ಮೀಟಿಂಗ್ ನಡೆಸಿಲ್ಲ. ಯಾವ
ಸಚಿವ, ಸಂಸದರಿಗೂ ಅಧಿಕಾರವಿಲ್ಲದಂತಾಗಿದೆ. ಇಂತಹ ಹೊಣೆಗೇಡಿ ಕೇಂದ್ರ ಸರ್ಕಾರ ಮತ್ತುಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಉಪಾಧ್ಯಕ್ಷ ಅಜ್ಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್. ಮೈಲಾರಪ್ಪ, ಕೆ.ಪಿ. ಸಂಪತ್‌ಕುಮಾರ್, ಬಿ.ಜಿ. ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಮುಖಂಡರಾದ ಸಯ್ಯದ್ ಅಲ್ಲಾಭಕ್ಷಿ, ಆರ್. ಪ್ರಕಾಶ್, ಎನ್.ಡಿ. ಕುಮಾರ್, ಜಿ. ಮನೋಹರ್, ಒ. ಶಂಕರ್, ಅಬ್ದುಲ್ಲಾ, ಕೆ. ಪಾಪಯ್ಯ, ಸಯ್ಯದ್ ವಲಿ ಖಾದ್ರಿ, ಡಾ| ರಹಮತ್‌ವುಲ್ಲಾ, ಎ. ಸಾಧಿಕ್ ವುಲ್ಲಾ, ಮಹಡಿ ಶಿವಮೂರ್ತಿ, ಚಾಂದ್‌ಪೀರ್, ನಾಗರಾಜ್ ಜಾನ್ಹವಿ, ಎಸ್.ಎನ್. ರವಿಕುಮಾರ್ ಮತ್ತಿತರರು ಇದ್ದರು.