ಧಾರವಾಡ: ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಮಾಲಿಕತ್ವದ ಪ್ರದೇಶದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಸಭಾಂಗಣದ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಸಂಗ್ರಾಮದಲ್ಲಿ 1857ಕ್ಕೂ ಮುಂಚೆಯೆ ರಾಜ್ಯದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮ ಇಲ್ಲಿ ನಡೆದಿದ್ದು ಹೆಮ್ಮೆಯ ವಿಚಾರ ಎಂದರು.
ವಿಧಿ ವಿಜ್ಞಾನ ವಿಭಾಗ ಬೆಳೆಯಲು ಲಾಲ್ ಕೃಷ್ಣ ಅಡ್ವಾಣಿ ಅವರ ಕೊಡುಗೆ ದೊಡ್ಡದು. ನಂತರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದರು. ನಾನು ಅವರೊಂದಿಗೆ ಸೇರಿ ಗುಜರಾತ್ ನಲ್ಲಿ ವಿಶ್ವ ವಿದ್ಯಾಲಯ ಕಟ್ಟಿದೆವು. ನಂತರ ಮೋದಿ ಪ್ರಧಾನಿಯಾದ ಮೇಲೆ ಇದಕ್ಕೆ ಇನ್ನಷ್ಟು ಒತ್ತು ಸಿಕ್ಕಿದೆ. ಇದರ ಭಾಗವಾಗಿ ಇಂದು ಧಾರವಾಡದಲ್ಲಿ 9 ನೇ ಕ್ಯಾಂಪಸ್ ನಿರ್ಮಾಣವಾಗುತ್ತಿದೆ ಎಂದರು.
ಇನ್ನು ಭಾರತದಲ್ಲಿ ಮಾತ್ರ ವಿಧಿ ವಿಜ್ಞಾನ ವಿವಿಯಿದೆ. ಇಲ್ಲಿ ಓದಿದ ಎಲ್ಲರಿಗೂ ನೌಕರಿ ಸಿಕ್ಕುತ್ತದೆ. ಅಲ್ಲದೆ, ನಕಲಿ ನೊಟು, ಸೈಬರ್ ಅಪರಾಧ ಅಧಿಕವಾಗುತ್ತಿವೆ. ಹೀಗಾಗಿ ಅಪರಾಧಿಗಳಿಗಿಂತ ಪೊಲೀಸರು ಒಂದು ಹೆಜ್ಜೆ ಮುಂದಿಡಬೇಕು. ಅದಕ್ಕೆ ಇದು ಅಗತ್ಯ ಸಹಾಯ ಮಾಡಲಿದೆ. ಅಪರಾದ ಪತ್ತೆ ಮತ್ತು ಅಪರಾಧಿಗಳ ಸಾಕ್ಷ್ಯ ಪುರಾವೆ ಒದಗಿಸಲು ಈ ವಿವಿ ಸಹಾಯ ಮಾಡಲಿದೆ. ಸಾಕ್ಷ್ಯಗಳ ಸಲುವಾಗಿ ಕಾನೂನು ಬದಲಾಗಿದೆ ಎಂದರು.
Related Articles
ಚಂಡೀಗಢ, ಪುಣೆ, ಗುವಾಹಟಿ, ಕೋಲ್ಕತ್ತಾದಲ್ಲಿ ಪೋರೆನ್ಸಿಕ್ ಕ್ಯಾಂಪಸ್ ತೆರೆಯಲಾಗಿದೆ. ಧಾರವಾಡದಲ್ಲಿ ಆಗಿರುವ ಈ ಕ್ಯಾಂಪಸ್ ನಿಂದ ನೌಕರಿ ಸಿಗುತ್ತದೆ. ಈ ಭಾಗದಲ್ಲಿ ಅಪರಾಧ ತಡೆಗೆ ಸಹಾಯ ಮಾಡುತ್ತದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಅಪರಾಧ ಸಂಖ್ಯೆಗಳು, ಸೈಬರ್, ಡಿಜಿಟಲ್ ಅಪರಾಧ ತಡೆಯಲು ನಮಗೆ ವಿಧಿ ವಿಗ್ನಾನ ತಂತ್ರಗ್ನಾನ ಅಗತ್ಯವಿದೆ. ನಾನು ಗೃಹ ಸಚಿವನಾಗಿದ್ದಾಗ ಕೂಡ ಇದಕ್ಕೆ ಸಹಕಾರ ನೀಡಿದ್ದೆ. ಇದೀಗ ಮತ್ತೊಂದು ಗರಿ ರಾಜ್ಯಕ್ಕೆ ಬಂದಿದೆ.ಇದು ರಾಜ್ಯಕ್ಕೆ ಬಳಕೆಯಾದರೂ ಉತ್ತರ ಕರ್ನಾಟಕ ಭಾಗಕ್ಕೆ, ವಿದ್ಯಾಕಾಶಿ ಧಾರವಾಡಕ್ಕೆ ಹೆಚ್ಚಿನ ಬಲ ತಂದಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವಿಧಿ ವಿಜ್ಞಾನ ಪದವಿ ಪಡೆದ ಎಲ್ಲರಿಗೂ ಕೆಲಸ ಸಿಗುತ್ತದೆ. ಅಪರಾಧಿಗಳು ಜಾಣರಾಗುತ್ತಿದ್ದಾರೆ. ಹೀಗಾಗಿ ಪೊಲೀಸ್ ಅದಕ್ಕಿಂತಾ ಒಂದು ಹೆಜ್ಜೆ ಮುಂದೆ ಇಡಬೇಕು. ಇದನ್ನು ಕೊಡುಗೆಯಾಗಿ ನೀಡಿದ ಅಮಿತ್ ಶಾ ಅವರಿಗೆ ಅಭಿನಂದಿಸುವುದಾಗಿ ಜೋಶಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಅಚಾರ, ಶಾಸಕ ಅರವಿಂದ ಬೆಲ್ಲದ್, ಎಸ್.ವಿ.ಸಂಕನೂರ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.