Advertisement
ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ವತಿಯಿಂದ ಮಂಗಳವಾರವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಫಾಯಿ ಕರ್ಮಚಾರಿಗಳ ಸಬಲೀಕರಣ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಒಂದು ಸಾವಿರ ಸಫಾಯಿ ಕರ್ಮಚಾರಿಗಳನ್ನು ವಿದೇಶ ಪ್ರವಾಸಕ್ಕೆ ಕಳಿಸುವ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆದಿದೆ ಎಂದರು. ವಿದೇಶಗಳಲ್ಲಿ ಅಳವಡಿಸಿಕೊಳ್ಳಲಾಗಿರುವ ಸ್ವತ್ಛತಾ ಕ್ರಮಗಳು, ಅನುಸರಿಸುವ ವಿಧಾನಗಳ ಬಗ್ಗೆ ನಮ್ಮ ಪೌರಕಾರ್ಮಿಕರು ತಿಳಿದುಕೊಳ್ಳ ಬೇಕು. ಜೊತೆಗೆ ವಿದೇಶಗಳಲ್ಲಿನ ಪೌರ ಕಾರ್ಮಿಕರ ಜೀವನ ಮಟ್ಟ, ಆರೋಗ್ಯ ಹೇಗಿರುತ್ತದೆ. ಅಲ್ಲಿನ
ಸರ್ಕಾರಗಳು ಅವರನ್ನು ಯಾವ ರೀತಿ ನಡೆಸಿಕೊ ಳ್ಳುತ್ತಾರೆ ಎಂದು ನೋಡಲು ಇಲ್ಲಿನ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಚಿಂತನೆ ಇದೆ. ಅಲ್ಲಿನ ಸ್ಥಿತಿಗಳ ಅಧ್ಯಯನದ ಜೊತೆಗೆ ತಮ್ಮ ಜೀವನದ ಹಂಗು ತೊರೆದು ಸ್ವತ್ಛತೆಯಲ್ಲಿ ತೊಡಗಿಸಿಕೊಂಡವರಿಗೆ ಗೌರವ ನೀಡಲು ಈ ವಿದೇಶ ಪ್ರವಾಸ ಆಯೋಜಿಸುವ ಉದ್ದೇಶ ಎಂದರು.
ಪೌರ ಕಾರ್ಮಿಕರ ಪಾತ್ರ ಮುಖ್ಯ. ಸ್ವತ್ಛ ಭಾರತದ ಎಲ್ಲ ಶ್ರೇಯಸ್ಸು ಪೌರ ಕಾರ್ಮಿಕರಿಗೆ ಸಲ್ಲುತ್ತದೆ. ಆದ್ದರಿಂದ ಪೌರ ಕಾರ್ಮಿಕರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ’ ಎಂದು ಆಂಜನೇಯ ತಿಳಿಸಿದರು. ಈಗಾಗಲೇ ಗುತ್ತಿಗೆ ಪದ್ದತಿಯನ್ನು ರದ್ದುಗೊ ಳಿಸಲಾಗಿದೆ. ಸ್ಥಳೀಯ ಪೌರ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ನೇಮಕಾತಿಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಾಗುತ್ತಿದೆ. ಪೌರ ಕಾರ್ಮಿಕರಿಗೆ 14 ಸಾವಿರ ರೂ. ವೇತನ ನೀಡಲಾಗುತ್ತಿದ್ದು, ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಸಫಾಯಿ ಕರ್ಮಚಾರಿಗಳ ಮನೆಗಳ ನಿರ್ಮಾಣಕ್ಕೆ ಎಸ್ ಸಿಪಿ-ಟಿಎಸ್‌ಪಿ ಯೋಜನೆಯಡಿ 200 ಕೋಟಿ ರೂ. ಮೀಸಲಿಡಲಾಗಿದೆ. ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮ ಸ್ಥಾಪಿಸಲು ಉದ್ದೇಶಿಸಲಾಗಿದ್ದು,
ಅದಕ್ಕಾಗಿ 25 ಕೋಟಿ ರೂ. ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್, ಅಂಬೇಡ್ಕರ್ ಅಭಿವೃದಿಟಛಿ ನಿಗಮದ ಅಧ್ಯಕ್ಷ ಬಸವರಾಜು ಮತ್ತಿತರರು ಇದ್ದರು. ಪೌರಕಾರ್ಮಿಕರ ಶೋಷಕರ ವಿರುದ್ದ ಗೂಂಡಾ ಕಾಯ್ದೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ, ವ್ಯವಸ್ಥೆಯ
ಕೆಲವೊಂದು ನ್ಯೂನತೆಗಳನ್ನು ದುರ್ಬಳಕೆ ಮಾಡಿಕೊಂಡು ಪೌರ ಕಾರ್ಮಿಕರ ಶೋಷಣೆ ಮಾಡುವ ವ್ಯವಸ್ಥಿತಿ ಜಾಲ ಕೆಲಸ
ಮಾಡುತ್ತಿದೆ. ಈ ರೀತಿ ಪೌರ ಕಾರ್ಮಿಕರನ್ನು ಶೋಷಣೆ ಮಾಡುವ ಅಥವಾ ಅದಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಕೆಲಸ ಮಾಡದ ಕೆಲವೊಂದು ಪುಡಾರಿ ಪೌರ ಕಾರ್ಮಿಕರ ವಿರುದ್ದ ಗೂಂಡಾ ಕಾಯ್ದೆ ಬಳಸುವ ಅವಶ್ಯಕತೆ ಇದೆ ಎಂದು ಸಚಿವ ಆಂಜನೇಯ ಪ್ರತಿಪಾದಿಸಿದರು.