Advertisement

ಲಚ್ಚು ಮೇಷ್ಟ್ರ ಸೂತ್ರಗಳು

10:31 AM Dec 11, 2019 | mahesh |

ಲಚ್ಚು ಮೇಷ್ಟ್ರು ಬಹಳ ಫೇಮಸ್ಸು. ಲಕ್ಷ್ಮೀ ನರಸಿಂಹ ಮೂರ್ತಿ ಅಂದರೆ ಇಡೀ ಜಗತ್ತಿಗೆ ಇರಲಿ, ಹೆಂಡತಿಗೂ ಕೂಡ ತಿಳಿಯುತ್ತಿರಲಿಲ್ಲ. ಲಚ್ಚು ಅಂದರೆ ಮಾತ್ರ ಅವರ ವರ್ಚಸ್ಸು ಬೆಳಗಿಬಿಡೋದು. ಅವರು ಪಾಠ ಮಾಡಿದ ನೂರಾರು ವಿದ್ಯಾರ್ಥಿಗಳು ಜಗತ್ತಿನ ನಾನಾ ಭಾಗಕ್ಕೆ ಹರಡಿ ಕೊಂಡಿದ್ದಾರೆ. ಆಗಾಗ ಲಚ್ಚು ಮೇಷ್ಟ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಲಚ್ಚು ಮೇಷ್ಟ್ರು ಕೇವಲ ಸಿಲಬಸ್‌ ಮೇಷ್ಟ್ರು ಆಗಿರಲಿಲ್ಲ. ಬದುಕಿನ ಪರಿವಿಡಿಯನ್ನು ರೂಪಿಸಿದರು. ಇಂತಿಪ್ಪ ಲಚ್ಚು ಮೇಷ್ಟ್ರು ತಮ್ಮ ಮಗನನ್ನು ಶಾಲೆಗೆ ಸೇರಿಸುವ ಸಂದರ್ಭ ಎದುರಾಯಿತು. ಮಗನ ವಿದ್ಯಾಭ್ಯಾಸದ ವಿಚಾರವಾಗಿ ಲಚ್ಚು ಮೇಷ್ಟ್ರಿಗೆ ಒಂದಷ್ಟು ಕನಸಗುಳಿದ್ದವು. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಹೆಡ್‌ಮಾಸ್ತರರ ಮುಂದೆ ಹರವಿಟ್ಟರು.

Advertisement

1 ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ.
2 ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿ ನೀನು ಓದಲಿಕ್ಕೆ ಬಂದಿದ್ದೀಯ ಎಂದು ದಯವಿಟ್ಟು ಹೇಳಿಕೊಡಬೇಡಿ.
3 ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖುಷಿಯಿಂದ, ಹೆಮ್ಮೆಯಿಂದ ನಿಷ್ಟೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ.
4 ಅವನಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ, ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ.
5 ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ.
6 ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ.
7 ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ.
8 ಸಾಧ್ಯವಾದರೆ ಅವನಿಗೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ, ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಾಗಿ ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ.
9 ಒಬ್ಬ ಡಾಕ್ಟರ್‌, ಎಂಜಿನಿಯರ್‌, ಉನ್ನತ ಅಧಿಕಾರಿಗಿಂತ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಲಿಸಿ
10 ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ, ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ.

ಅವನಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ ಎಲ್ಲವನ್ನು ತಿಳಿದ ಹೆಡ್‌ ಮಾಸ್ಟರ್‌ ಕಣ್ಣಲ್ಲಿ ನೀರು ಬಂತು.

Advertisement

Udayavani is now on Telegram. Click here to join our channel and stay updated with the latest news.

Next