Advertisement

ಮಂಗಳೂರು, ಗೋವಾ ವಿವಿ ಮಾಜಿ ಉಪಕುಲಪತಿ ಪ್ರೊ.ಬಿ. ಶೇಖ್ ಅಲಿ ನಿಧನ

03:06 PM Sep 01, 2022 | Team Udayavani |

ಮೈಸೂರು: ಖ್ಯಾತ ಇತಿಹಾಸ ತಜ್ಞ, ಮಂಗಳೂರು ಮತ್ತು ಗೋವಾ ವಿವಿಗಳ ಮಾಜಿ ಉಪಕುಲಪತಿ ಪ್ರೊ. ಬಿ ಶೇಖ್ ಅಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

Advertisement

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗುರುವಾರ ಕೊನೆಯುಸಿರೆಳೆದಿದ್ದಾರೆ.ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಪ್ರೊ. ಬಿ ಶೇಖ್ ಅಲಿ ಅವರ ಅಂತಿಮ ವಿಧಿಗಳನ್ನು ಮುಸ್ಲಿಂ ಹಾಸ್ಟೆಲ್ ಮಸೀದಿಯಲ್ಲಿ ನಡೆಸಲಾಗುವುದು, ನಂತರ ಮೈಸೂರಿನ ಮೈಸೂರು ಜೈಲು ಟಿಪ್ಪು ವೃತ್ತದ ಹಿಂಭಾಗದ ಮುಖ್ಯ ಖಬರಸ್ಥಾನದಲ್ಲಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಅಲಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next