Advertisement
1995-2000ದ ಅವಧಿಯಲ್ಲಿ ಲೊರೆಂಝೊ ಸ್ಯಾಂಜ್ ರಿಯಲ್ ಮ್ಯಾಡ್ರಿಡ್ ತಂಡದ ಅಧ್ಯಕ್ಷ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಅವರ ತಂಡ 2 ಚಾಂಪಿಯನ್ಸ್ ಲೀಗ್‌ಗಳಲ್ಲಿ ಪ್ರಶಸ್ತಿ ಎತ್ತಿತ್ತು.ತನ್ನ ತಂದೆಯನ್ನು ಮ್ಯಾಡ್ರಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೋವಿಡ್ 19 ತಗಲಿರುವುದು ದೃಢಪಟ್ಟಿದೆ ಎಂದು ಜೂ. ಸ್ಯಾಂಜ್ 3 ದಿನಗಳ ಹಿಂದೆ ತಿಳಿಸಿದ್ದರು.
ಲೊರೆಂಝೊ ಸ್ಯಾಂಜ್ 1980ರ ನಡು ಅವಧಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರವೇಶಿಸಿದ್ದರು. ಆಗ ರಮೋನ್ ಮೆಂಡೋಂಝ ಇದರ ಅಧ್ಯಕ್ಷರಾಗಿದ್ದರು. 1995ರಲ್ಲಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಜುಪ್ ಹೆಂಕೆಸ್ ಕೋಚ್ ಆಗಿದ್ದ ಈ ತಂಡದಲ್ಲಿ ಡೇವರ್ ಸುಕರ್, ರಾಬರ್ಟೊ ಕಾರ್ಲೋಸ್, ಕ್ಲಾರೆನ್ಸ್ ಸೀಡಾಫ್ì, ಫೆರ್ನಾಂಡೊ ಹೀರೊ ಮತ್ತು ರಾಲ್ ಮೊದಲಾದ ಸ್ಟಾರ್ ಆಟಗಾರರಿದ್ದರು. 1998ರಲ್ಲಿ ಜುವೆಂಟಸ್ ತಂಡವನ್ನು ಸೋಲಿಸುವ ಮೂಲಕ ರಿಯಲ್ ಮ್ಯಾಡ್ರಿಡ್ “ಚಾಂಪಿಯನ್ಸ್ ಲೀಗ್’ ಚಾಂಪಿಯನ್ ಆಗಿತ್ತು. ಇದು ರಿಯಲ್ ಮಾಡ್ರಿಡ್ ತಂಡಕ್ಕೆ ಒಲಿದ 7ನೇ, ಆದರೆ 32 ವರ್ಷಗಳ ಬಳಿಕ ಒಲಿದ ಮೊದಲ ಯುರೋಪಿಯನ್ ಕಪ್ ಪ್ರಶಸ್ತಿ ಆಗಿತ್ತು. 2 ವರ್ಷಗಳ ಬಳಿಕ ಪ್ಯಾರಿಸ್‌ನಲ್ಲಿ ವೆಲೆನ್ಸಿಯಾ ತಂಡವನ್ನು ಪರಾಭವಗೊಳಿಸಿ 8ನೇ ಪ್ರಶಸ್ತಿಯನ್ನೆತ್ತಿತು.
Related Articles
“ಇದು ರಿಯಲ್ ಮ್ಯಾಡ್ರಿಡ್ ತಂಡದ ಪಾಲಿಗೆ ಅತ್ಯಂತ ದುಃಖದ ದಿನ. ಲೊರೆಂಝೊ ಸ್ಯಾಂಜ್ ನಿನ್ನೆ ಹಾಗೂ ಇಂದಿನ ನಡು ವಿನ ಕೊಂಡಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ವನ್ನು ಸಹಿಸುವ ಶಕ್ತಿ ಲಭಿಸಲಿ, ಸ್ಯಾಂಜೊ ಆತ್ಮಕ್ಕೆ ಶಾಂತಿ ಲಭಿ ಸಲಿ’ ಎಂದು ರಿಯಲ್ ಮ್ಯಾಡ್ರಿಡ್ ತಂಡದ ನಾಯಕ, ಸ್ಪೇನ್ ತಂಡದ ಆಟಗಾರ ಸರ್ಗಿಯೊ ರಮೋಸ್ ಟ್ವೀಟ್ ಮಾಡಿದ್ದಾರೆ.
Advertisement