Advertisement

ಎನ್‌ಐಎ ಮುಖ್ಯಸ್ಥರಾಗಿ ಗುಪ್ತಾ ನೇಮಕ

09:04 PM Jun 23, 2022 | Team Udayavani |

ನವದೆಹಲಿ: ಪಂಜಾಬ್‌ನ ಮಾಜಿ ಡಿಜಿಪಿ ದಿನಕರ್‌ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ನೂತನ ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

Advertisement

ಎನ್‌ಐಎ ಮುಖ್ಯಸ್ಥರಾಗಿದ್ದ ವೈ.ಸಿ.ಮೋದಿ ಅವರ ನಿವೃತ್ತಿಯ ನಂತರ ಕಳೆದ ವರ್ಷ ಸಿಆರ್‌ಪಿಎಫ್ ಡಿಜಿ ಕುಲ್‌ದೀಪ್‌ ಸಿಂಗ್‌ ಅವರು ತನಿಖಾ ಸಂಸ್ಥೆಯ ಹೆಚ್ಚುವರಿ ಹೊಣೆಯನ್ನು ಹೊತ್ತಿದ್ದರು.

ಈಗ 1987ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಗುಪ್ತಾರನ್ನು ಎನ್‌ಐಎ ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಿ ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಮಾ.31, 2024ರವರೆಗೆ ಅವರ ಅಧಿಕಾರಾವಧಿ ಇರಲಿದೆ. ಪಂಜಾಬ್‌ ಡಿಜಿಯಾಗಿ ಹಾಗೂ  ಪಂಜಾಬ್‌ ಗುಪ್ತಚರ ಇಲಾಖೆ ಡಿಜಿಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next