Advertisement

ವಿದ್ಯುತ್ ಕೊಡದಿದ್ದರೆ ಕ್ರಿಮಿನಾಶಕ ಸೇವಿಸಿ ಕಚೇರಿ ಎದುರು ಆತ್ಮಹತ್ಯೆ

04:28 PM Oct 21, 2021 | Shwetha M |

ಸಿಂದಗಿ: ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಕೈಗೆ ಬಂದ ಬೆಳೆಗಳು ಒಣಗುತ್ತಿವೆ. ವಿದ್ಯುತ್ ನೀಡಿ ಇಲ್ಲವೆ, ಕ್ರೀಮಿನಾಶಕ ಸೇವಿಸಿ ಕಚೇರಿ ಎದುರು ಸಾಯುತ್ತೇವೆ ಎಂದು ತಾಲೂಕಿನ ಬ್ಯಾಕೋಡ, ಬನ್ನೆಟ್ಟಿ ಪಿ.ಎ. ಗ್ರಾಮದ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು, ಕೈಯಲ್ಲಿ ಕ್ರೀಮಿನಾಶಕ ಬಾಟಲ್ ಹಿಡಿದು ಗುರುವಾರ ಪಟ್ಟಣದ ಹೆಸ್ಕಾಂ ಉಪವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಬಸವೇಶ್ವರ ವೃತ್ತದ ಮಾರ್ಗವಾಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಚುನಾವಣೆ ಇದೆ, ಯಾವುದೇ ಪ್ರತಿಭಟನೆ ಮಾಡಬೇಡಿ, ನಿಮ್ಮ ಮನವಿಯನ್ನು ಅಧಿಕಾರಿಗಳಿಗೆ ನೀಡಿ ಎಂದು ಪೊಲೀಸರು ಪ್ರತಿಭಟನಾ ನಿರತ ರೈತರಿಗೆ ಮನವರಿಕೆ ಮಾಡಿದರೂ, ರೈತರು ಪ್ರತಿಭಟನೆ ಮುಂದುವೆರೆಸಿದರು.

ಇದನ್ನೂ ಓದಿ: ಉತ್ತರಾಖಂಡ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ: ಸಚಿವ ಆರ್.ಅಶೋಕ್

ತಾಲೂಕಿನ ಬ್ಯಾಕೋಡ, ಬನ್ನಟ್ಟಿ ಪಿ.ಎ ಗ್ರಾಮ ಹೊಲಗಳಿಗೆ ಕಳೆದ 8 ದಿನಗಳಿಂದ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. 350 ವೋಲ್ಟೆಜ್ ವಿದ್ಯುತ್ ನೀಡುವ ಬದಲಾಗಿ 150ಕ್ಕಿಂತ ಕಡಿಮೆ ವೋಲ್ಟೆಜ್ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಸರಬರಾಜು ಮಾಡುವ ವಯರ್ ಹಿಡಿದರೂ ಸಾಯುವುದಿಲ್ಲ. ಅಷ್ಟು ಕಳಪೆ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಜಮೀನುಗಳಲ್ಲಿನ ಬಾವಿ, ಕೊಳವೆ ಬಾವಿಗಳ ಮೋಟರ್‌ಗಳು ಹೇಗೆ ಪ್ರಾರಂಭವಾಗುತ್ತವೆ. 8 ದಿನಗಳಿಂದ ವಿದ್ಯುತ್ ನೀಡದೇ ಇರುವುದರಿಂದ ಬೆಳೆದ ಬೆಳೆಗೆ ನೀರು ಬಿಡಲಾಗದೆ ಬೆಳೆಗಳು ಒಣಗುತ್ತಿವೆ.  ನಮಗೆ ವಿದ್ಯುತ್ ನೀಡಿ ಇಲ್ಲವೇ ವಿಷ ಕುಡಿಯಲು ಅನುಮತಿ ನೀಡಿ. ದಿನಾ ಸಾಯುವ ಬದಲು ನಿಮ್ಮ ಕಚೇರಿ ಮುಂದೆ ಕ್ರೀಮಿನಾಶಕ ಕುಡಿದು ಸಾಯುತ್ತೇವೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬ್ಯಾಕೋಡ ಮತ್ತು ಬನ್ನೆಟ್ಟಿ ಪಿ.ಎ. ಗ್ರಾಮದ ರೈತರಾದ ನಾನಾಗೌಡ ಬಿರಾದಾರ, ಶಂಕರಗೌಡ ಪಾಟೀಲ, ಐಯ್ಯನಗೌಡ ಬಿರಾದಾರ, ವಿಶ್ವನಾಥ ರೆಡ್ಡಿ, ಲಕ್ಷ್ಮಣ ಚಲವಾದಿ, ಆನಂದ ಹರನಾಳ, ಗೌಡಪ್ಪಗೌಡ ಬಿರಾದಾರ, ಮದನಗೋಪಾಲ ಸಾಲೋಟಗಿ, ವಿಶ್ವನಾಥ ರೆಡ್ಡಿ, ಮಲ್ಲನಗೌಡ ಮೇಲಿನಮನಿ, ಮುನ್ನಾ ವಾಲಿಕಾರ, ಮುತ್ತಣ್ಣ ಪೂಜಾರಿ, ಗುರೆಡ್ಡಿ ಬಿರಾದಾರ ಸೇರಿದಂತೆ ನೂರಾರು ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next