Advertisement

ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಝಡ್ ಪ್ಲಸ್ ಭದ್ರತೆ

07:14 PM Sep 07, 2022 | Team Udayavani |

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕೇಂದ್ರ ಅರೆಸೇನಾ ಪಡೆಯ ‘ಝಡ್ ಪ್ಲಸ್’ ವರ್ಗದ ವಿಐಪಿ ಭದ್ರತೆಯನ್ನು ಕೇಂದ್ರವು ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

Advertisement

ಕೋವಿಂದ್ ಅವರಿಗೆ ಅಖಿಲ ಭಾರತ ಆಧಾರದ ಮೇಲೆ ಸಶಸ್ತ್ರ ಬೆಂಗಾವಲು ನೀಡಲಾಗುವುದು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಿಐಪಿ ಭದ್ರತಾ ಕಮಾಂಡೋ ಘಟಕವು ಕಾರ್ಯವನ್ನು ನಿರ್ವಹಿಸುತ್ತದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಡಿದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಭದ್ರತೆಯನ್ನು ಮಂಜೂರು ಮಾಡಿದೆ ಮತ್ತು ಸೆ. 5 ರಂದು ಪಡೆ ಈ ಕಾರ್ಯವನ್ನು ವಹಿಸಿಕೊಂಡಿದೆ.ಕೇಂದ್ರ ದೆಹಲಿಯ ಜನಪಥ್ ರಸ್ತೆಯಲ್ಲಿರುವ ಮಾಜಿ ರಾಷ್ಟ್ರಪತಿಯವರ ಮನೆಗೂ ಪಡೆ ಭದ್ರತೆ ನೀಡಲಿದೆ.

14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ 76 ವರ್ಷದ ಕೋವಿಂದ್ ಅವರು ಜುಲೈನಲ್ಲಿ ಅಧಿಕಾರ ಅವಧಿ ಮುಕ್ತಾಯಗೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next