Advertisement

ಪಾಕಿಸ್ತಾನದ ಮಾಜಿ ಅಧ್ಯಕ್ಷ ರಫೀಕ್‌ ತರಾರ್‌ ನಿಧನ

05:27 PM Mar 08, 2022 | Shreeram Nayak |

ಲಾಹೋರ್‌: 1997 ರಿಂದ 2001ರವರೆಗೆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಾಕಿಸ್ತಾನದ ಮಾಜಿ ನ್ಯಾಯಾಧೀಶ ರಫೀಕ್‌ ತರಾರ್‌ (92)ಅವರು ಲಾಹೋರ್‌ನ ಪೂರ್ವ ನಗರದಲ್ಲಿ ಸೋಮವಾರ(ಮಾ.7)ರಂದು ನಿಧನರಾದರು.
ತರಾರ್‌ ಅವರ ಮೊಮ್ಮಗ ಅಜಮ್‌ ತರಾರ್‌ ಅವರು ತಮ್ಮ ಅಜ್ಜ ನಿಧನರಾಗಿದ್ದಾರೆ ಎಂದು ಟ್ವಿಟರ್‌ ನಲ್ಲಿ ಘೋಷಿಸಿದ್ದಾರೆ.

Advertisement

ಗಣ್ಯರ ಸಂತಾಪ
ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲಿ,ಪ್ರಧಾನಿ ಇಮ್ರಾನ್‌ ಖಾನ್‌ ,ಪ್ರಮುಖ ರಾಜಕಾರಣಿಗಳು ಮತ್ತು ದೇಶದ ಮಿಲಿಟರಿ ಮುಖ್ಯಸ್ಥ ಜನರಲ್ ಕ್ವಾಮರ್ ಜಾವೇದ್‌ಬಾಜ್ವಾ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

1997ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ಪಕ್ಷವು ಅವರನ್ನು ಬೆಂಬಲಿಸಿದ ನಂತರ ತರಾರ್‌ ಅವರು ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ತರಾರ್‌ ಅವರು 1997ರಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಗೆದ್ದ ಷರೀಫ್ ಅವರ ಆತ್ಮೀಯ ಸ್ನೇಹಿತರಾಗಿದ್ದರು.

1999ರಲ್ಲಿ ರಕ್ತರಹಿತ ದಂಗೆಯಲ್ಲಿ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್‌ ಮುಷರಫ್ ಅವರು ನವಾಜ್‌ ಷರೀಫ್ ಅವರನ್ನು ಅಧಿಕಾರದಿಂದ ಹೊರಹಾಕಿದರು.ಆದಾಗ್ಯೂ ಮುಷರಫ್ ತರಾರ್‌ ಅವರನ್ನು 2001ರವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next