Advertisement

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಾಹನದ ಮೇಲೆ ಗುಂಡಿನ ದಾಳಿ

06:01 PM Nov 03, 2022 | Team Udayavani |

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿ ತಮ್ಮ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಅವರನ್ನು ಕರೆದೊಯ್ಯುತ್ತಿದ್ದ ಕಂಟೈನರ್-ಮೌಂಟೆಡ್-ಟ್ರಕ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಅವರಿಗೆ ಬುಲೆಟ್ ಗಾಯವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಪಂಜಾಬ್‌ನ ವಜೀರಾಬಾದ್‌ನ ಅಲ್ಲಾವಾಲಾ ಚೌಕ್ ಬಳಿ ಈ ಘಟನೆ ನಡೆದಿದೆ. ಜಿಯೋ ಟಿವಿ ಫೂಟೇಜ್ 70 ವರ್ಷದ ಖಾನ್ ಅವರ ಬಲಗಾಲಿಗೆ ಪೆಟ್ಟಾಗಿದೆ ಎಂದು ತೋರಿಸಿದೆ. ದಾಳಿಯ ವೇಳೆ ಅವರು ತೆರಳುತ್ತಿದ್ದ ಕಂಟೈನರ್‌ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ಪೊಲೀಸರು ಅವರನ್ನು ಸ್ಥಳಾಂತರಿಸಿದರು. ಸ್ಥಳದಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಚಾನೆಲ್ ವರದಿ ಮಾಡಿದೆ.

ಆರಂಭದಲ್ಲಿ, ಖಾನ್ ಸುರಕ್ಷಿತವಾಗಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಖಾನ್ ಕೂಡ ಗಾಯಗೊಂಡಿದ್ದಾರೆ ಎಂದು ನಂತರ ತಿಳಿದುಬಂದಿದೆ.

ದಾಳಿಯಲ್ಲಿ ಖಾನ್ ಅವರ ಆಪ್ತ ಸಹಾಯಕ ಸೆನೆಟರ್ ಫೈಸಲ್ ಜಾವೇದ್ ಕೂಡ ಗಾಯಗೊಂಡಿದ್ದಾರೆ ಎಂಬ ವರದಿಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next