Advertisement

ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರ

12:57 AM May 19, 2022 | Team Udayavani |

ಕುಂದಾಪುರ: ಉತ್ತರ ಯುರೋಪ್‌ನ ನಾರ್ವೆ ದೇಶದ ಮಾಜಿ ಸಚಿವ ಎರಿಕ್‌ ಸೊಲ್ಹೆಮ್‌ ಅವರು ಮರವಂತೆಯ ಸಮುದ್ರ ತೀರದ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Advertisement

ಎರಿಕ್‌ ಸೊಲ್ಹೆಮ್‌ ಅವರು ನಾರ್ವೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರ ರಾಗಿದ್ದು ರಾಜಕೀಯ ಪ್ರವೇಶಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವರಾಗಿ, ಪರಿಸರ ಸಚಿವರಾಗಿ 2012ರ ವರೆಗೆ ಸೇವೆ ಸಲ್ಲಿಸಿದ್ದಾರೆ.

ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರರಾಗಿ ತಮ್ಮ ಹಿಂದಿನ ಸ್ಥಾನಕ್ಕೆ ಮರಳಿದರು. 2016ರಿಂದ 2018ರ ವರೆಗೆ ವಿಶ್ವಸಂಸ್ಥೆಯ ಅಂಡರ್‌-ಸೆಕ್ರೆಟರಿ-ಜನರಲ್‌ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.

ಬೇರೆ ಬೇರೆ ದೇಶಗಳ ವಿಶೇಷ ಎನಿಸುವ ಚಿತ್ರ, ವೀಡಿಯೊ ತುಣುಕುಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಅವರು ಶೇರ್‌ ಮಾಡಿಕೊಂಡಿದ್ದು ಭಾರತದ ಅನೇಕ ಸ್ವಚ್ಛತೆ, ಗ್ರಾಮಾಂತರ ಪ್ರದೇಶದ ವಿಶೇಷಗಳು, ವೈರಲ್‌ ವೀಡಿಯೊಗಳು, ಚಿತ್ರ, ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮೇ 17ರಂದು ಮರವಂತೆಯ ಚಿತ್ರವನ್ನು ಸೈಕಲಿಂಗ್‌ ಮಾಡಬಹುದಾದ ವಿಶ್ವದ ಅತ್ಯಂತ ಚಂದದ ರಸ್ತೆ, ಭಾರತದ ಉಡುಪಿ ಜಿಲ್ಲೆಯ ಮರವಂತೆಯಲ್ಲಿದೆ ಎಂದು ಹಂಚಿಕೊಂಡಿದ್ದಾರೆ. ಇದನ್ನು ಒಂದೇ ದಿನದಲ್ಲಿ 81 ಸಾವಿರ ಮಂದಿ ಇಷ್ಟಪಟ್ಟು, 7 ಸಾವಿರ ಮಂದಿ ಮರುಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next