Advertisement

ಕಂಪ್ಲಿಯಲ್ಲಿ ಹಾಲಿ ಶಾಸಕ ಗಣೇಶ್ ಗೆ ಮಾಜಿ ಶಾಸಕ ಸುರೇಶ್ ಬಾಬು ಸವಾಲು

09:00 PM Jul 22, 2022 | Team Udayavani |

ಕುರುಗೋಡು : ಹಾಲಿ ಶಾಸಕ ಸುಳ್ಳು ಹಬ್ಬಿಸುವುದು ಬಿಟ್ಟು ತಾಕತ್ತು ಇದ್ದರೆ ಜನ ಸೇವೆ ಮಾಡಲಿ, ಅದನ್ನು ಬಿಟ್ಟು ಕಾಮಗಾರಿಗಳು ಸ್ಥಗಿತ ಗೊಳಿಸಿದ್ದಾನೆ ಅಂತ ಹೇಳುವುದು ಒಬ್ಬ ಜನಪ್ರತಿನಿಧಿಯ ಲಕ್ಷಣವಲ್ಲ ಎಂದು ಮಾಜಿ ಶಾಸಕ ಸುರೇಶ್ ಬಾಬು ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಕಿಡಿಕಾರಿದರು.

Advertisement

ಪಟ್ಟಣದ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕ ಗಣೇಶ್ ಕ್ಷೇತ್ರದ ಜನರ ಅನುಕೂಲ ಮರೆತು ಎಲ್ಲಂದರಲ್ಲಿ ಕಾಮಗಾರಿಗಳು ನಡೆಸುತ್ತಿದ್ದಾರೆ. ಕುರುಗೋಡಲ್ಲಿ ಮಿನಿವಿಧಾನ ಸೌಧಕ್ಕೆ ಸೂಕ್ತವಾದ ಸ್ಥಳ ನೋಡದೆ ಸೌಳ ಜಾಗದಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಕಂಪ್ಲಿ ಯಲ್ಲಿ ಕೂಡ ಅದೇ ರೀತಿ ಮಾಡಿದ್ದಾರೆ. ಕಾರಣ ಎರಡು ತಾಲೂಕಿನ ಮಿನಿವಿಧಾನಸೌಧ ಮುಂಭಾಗದಲ್ಲಿ 20 ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಅದಕ್ಕಾಗಿ ತನ್ನ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇನ್ನೂ ನಾನು ಶಾಸಕನಾಗಿ ಇದ್ದಾಗ ಕಂಪ್ಲಿ ಮತ್ತು ಕುರುಗೋಡು ಎರಡು ಕ್ಷೇತ್ರವನ್ನು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ತಾಲೂಕುಗಳನ್ನಾಗಿ ಮಾಡಿದ್ದಲ್ಲದೆ ಅನೇಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದೆ, ಸದ್ಯ ಶಾಸಕ ಗಣೇಶ್ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಶೂನ್ಯ ಎಂದರು.

ಕ್ಷೇತ್ರದ ಜನತೆ ಮುಂದೆ ಇಲ್ಲ ಸಲ್ಲದ ಸುಳ್ಳು ಹಬ್ಬಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಬಿಟ್ಟು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಹಿರಂಗವಾಗಿ ಚರ್ಚೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಅಲ್ಲದೆ ಕುರುಗೋಡು ಮತ್ತು ಕಂಪ್ಲಿ ಎರಡು ತಾಲೂಕುಗಳಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಚಿವ ಬಿ. ಶ್ರೀರಾಮುಲು ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಗೊಳಿಸಿ ತಲಾ ಒಂದು ಆಸ್ಪತ್ರೆಗೆ 20 ಕೋಟಿ ಮಂಜೂರು ಮಾಡಿಸಿದ್ದಾರೆ. ಇನ್ನೂ 3 ತಿಂಗಳ ಒಳಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಶ್ರೀರಾಮುಲು ಭೂಮಿ ಪೂಜೆ ನೆರೆವೇರಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

Advertisement

ಅಲ್ಲದೆ ಕಂಪ್ಲಿಯಿಂದ ಗಂಗಾವತಿ ಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕ್ಕೆ 80 ಕೋಟಿ ಮಂಜೂರು ಆಗಿದ್ದು ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ಗೊಳ್ಳಲಿದೆ ಎಂದರು.

ಕೊನೆಯದಲ್ಲಿ ಮಾಧ್ಯಮದವರು ತಾಲೂಕು ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವಂತೆ ಕೇಳಿದ ಪ್ರೆಶ್ನೆಗೆ ಸ್ಥಳದಲ್ಲೇ ಸಚಿವ ಶ್ರೀರಾಮುಲು ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ಪ್ರಸ್ತಾಪಿಸಿದರು, ಇದಕ್ಕೆ ಸೂಕ್ತ ವಾಗಿ ಸ್ಥಳ ನೋಡಿ ಮುಂದಿನ ದಿನಗಳಲ್ಲಿ ಪತ್ರಿಕಾ ಭವನ ಒದಗಿಸಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಪುರಸಭೆ ಬಿಜೆಪಿ ಸದಸ್ಯರು, ಕಾರ್ಯಕರ್ತರು, ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next