Advertisement

ಕಾಲುವೆ ಕುಸಿತ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

02:52 PM Mar 09, 2022 | Team Udayavani |

ಹುಣಸಗಿ: ತಾಲೂಕಿನ ಅಗ್ನಿ ಬಳಿ ಎಡದಂಡೆ ಮುಖ್ಯ ಕಾಲುವೆ ಕುಸಿತ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಜೀವನಾಡಿಯಾದ ಕಾಲುವೆ ಕುಸಿತದಿಂದ ರೈತಾಪಿ ಜನರಿಗೆ ಆತಂಕ ಮೂಡಿಸಿದೆ. ಈಗಾಗಲೇ ಅಚ್ಚುಕಟ್ಟು ಪ್ರದೇಶದ ರೈತರ ಭತ್ತದ ಪೈರುಗಳು ತೆನೆ ಹಿರಿಯುವ ಹಂತಕ್ಕೆ ಬಂದಿವೆ. ರೈತರ ಹಿತದೃಷ್ಟಿಯಿಂದ ಕೂಡಲೇ ತಾತ್ಕಾಲಿಕ ಕಾಮಗಾರಿ ಕೆಬಿಜೆಎನ್ ಎಲ್ ಅಧಿಕಾರಿಗಳು ಬೇಗ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪದೇ ಪದೇ ಕುಸಿತ ಬಗ್ಗೆ ಈಗಾಗಲೇ ತಿಳಿದು ವಿಷಯ. ಆದರೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಕಾಮಗಾರಿ ನಡೆಸಿ ಕುಸಿತ  ಸಮಸ್ಯೆ ತಪ್ಪಿಸಬೇಕು. ಮಾ.14 ಕಾಲುವೆಗೆ ನೀರು ಹರಿಸುವ ಮುಂಚಿತವಾಗಿ ಅಧಿಕಾರಿಗಳು ತಾತ್ಕಾಲಿಕ ಕೆಲಸ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭ ವಿವಿಧ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next