Advertisement

ಮಾಜಿ ಶಾಸಕ ಪಾಟೀಲ್ ಕಾರು ಅಪಘಾತ: ಬೈಕ್‌ ಸವಾರ ಸಾವು

10:51 AM Jun 16, 2019 | Suhan S |

ಬೆಳಗಾವಿ: ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಕಾರು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಾಡಲಗಿ-ಕಬ್ಬೂರ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

Advertisement

ರಾಯಬಾಗ ಪಟ್ಟಣದ ರಾಮು ನಾಯಿಕ (50) ಮೃತಪಟ್ಟ ಬೈಕ್‌ ಸವಾರ. ಹಿಂಬದಿ ಕುಳಿತ ರಾಮು ಪತ್ನಿ ಪ್ರಭಾವತಿ ನಾಯಿಕ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿದೆ.

ಘಟನೆ ಹಿನ್ನೆಲೆ: ಖಾಸಗಿ ಕಾರ್ಯಕ್ರಮಕ್ಕಾಗಿ ರಾಯಬಾಗ ಪಟ್ಟಣಕ್ಕೆ ಮಾಜಿ ಶಾಸಕ ಅರವಿಂದ ಪಾಟೀಲ್ ದಂಪತಿ ತೆರಳುತ್ತಿದ್ದರು. ಬೈಕ್‌ ಡಿಕ್ಕಿಯಾಗುತ್ತಿದಂತೆ ಅರವಿಂದ ಪಾಟೀಲ ಕಾರು ಪಲ್ಟಿಯಾಗಿದೆ. ಸಣ್ಣಪುಟ್ಟ ಗಾಯಗಳಿಂದ ಅರವಿಂದ ಪಾಟೀಲ್ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತವಾದ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದು, ಘಟನೆ ಭೀತಿಯಿಂದ ಅರವಿಂದ ಪಾಟೀಲ್ ಸ್ಥಳದಿಂದ ಪರಾರಿಯಾಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಯಬಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next