ಉತ್ತರಪ್ರದೇಶ ; ಭೂ ವಿವಾದಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮಾಜಿ ಶಾಸಕರೊಬ್ಬರನ್ನು ಕೋಲಿನಿಂದ ಹೊಡೆದು ಕೊಲೆಗೈದ ಘಟನೆ ಲಕ್ಷ್ಮೀಪುರ ಖೇರಿಯ ತ್ರಿಕೋಲಿಯ ಎಂಬಲ್ಲಿ ರವಿವಾರ ಸಂಭವಿಸಿದೆ.
ಈ ಘಟನೆಯಲ್ಲಿ ಉತ್ತರ ಪ್ರದೇಶದ ಲಕ್ಷ್ಮೀಪುರ ಖೇರಿಯ ಪಾಲಿಯ ಕ್ಷೇತ್ರದ ಮಾಜಿ ಶಾಸಕರಾದ ನಿರ್ವೇಂದ್ರ ಕುಮಾರ್ ಮಿಶ್ರಾ ಅವರೇ ದುಷ್ಕರ್ಮಿಗಳ ದಾಳಿಗೆ ಒಳಗಾದವರು.
ಕಳೆದ ಹಲವು ಭೂ ವಿವಾದಕ್ಕೆ ಸಂಬಂಧಿಸಿ ಗಲಾಟೆಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ ಆದರೆ ಇಂದು ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಮಾಜಿ ಶಾಸಕರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅದನ್ನು ತಡೆಯಲು ನಿರ್ವೇಂದ್ರ ಕುಮಾರ್ ಹೋಗಿದ್ದಾರೆ ಈ ಸಂದರ್ಭ ದುಷ್ಕರ್ಮಿಗಳು ಶಾಸಕರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಜೊತೆಗೆ ಇದ್ದ ಶಾಸಕರ ಮಗನಿಗೂ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಗಂಭೀರ ಗಾಯಗೊಂಡ ಮಾಜಿ ಶಾಸಕರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮದ್ಯೆ ಸಾವನ್ನಪಿದ್ದರೆ ಎನ್ನಲಾಗಿದೆ.
ನಿರ್ವೇಂದ್ರ ಕುಮಾರ್ ಅವರು ಪಾಲಿಯಾ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎನ್ನಲಾಗಿದೆ.
ಮಾಜಿ ಶಾಸಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಊರಿನ ಜನರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಶಾಸಕರ ಸಾವಿಗೆ ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ.