ಕೋಲಾರ: ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ 10 ಸಾವಿರ ರೂ. ಹಾಕುತ್ತಿರುವ ಯೋಜನೆ ಜಾರಿ ಮಾಡಿದ ಬಿಜೆಪಿಯನ್ನು ಜನತೆ ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದರು.
ತಾಲೂಕಿನ ನರಸಾಪುರ ಹೋಬಳಿಯ ಬಿಜೆಪಿ ಸ್ವಾಭಿಮಾನ ಸಂಕಲ್ಪ ಬೃಹತ್ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ಬಿಜೆಪಿಯಿಂದ ದೇಶ ಮತ್ತು ರಾಜ್ಯ ಅಭಿವೃದ್ಧಿ. ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ. 60 ವರ್ಷ ಕಾಂಗ್ರೆಸ್ ಸರ್ಕಾರ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಕೇವಲ ಒಂಬತ್ತು ವರ್ಷದಲ್ಲಿ ಮಾಡಿ ತೋರಿಸಿದೆ ಎಂದರು.
ಕೈ-ದಳದವರ ಮಾತು ನಂಬಬೇಡಿ: ಈ ದೇಶದಲ್ಲಿ ಈ ರಾಜ್ಯದಲ್ಲಿ ಹಿಂದುತ್ವ ಉಳಿಯಬೇಕಾದರೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು. ಭಾರತೀಯ ಜನತಾ ಪಕ್ಷ ದಲಿತರ ವಿರೋಧಿಯಾಗಿದ್ದರೆ ಮೀಸಲಾತಿ ಹೆಚ್ಚಿಸುತ್ತಿರಲಿಲ್ಲ. ಸುಖ ಸುಮ್ಮನೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇವರ ಮಾತುಗಳನ್ನು ನೀವು ನಂಬಬೇಡಿ. ದಲಿತರನ್ನ ರಾಷ್ಟ್ರಪತಿಯನ್ನಾಗಿ ಮಾಡಿದ ಪಕ್ಷ ಬಿಜೆಪಿ. ಮುಸ್ಲಿಂರನ್ನು ಆಂಧ್ರದ ರಾಜ್ಯಪಾಲರನ್ನಾಗಿ ಮಾಡಿದ್ದಾರೆ ಕಾಂಗ್ರೆಸ್ ಪಕ್ಷ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರ: ಕಾರ್ಯಕರ್ತರು ನಿಮ್ಮ ಗ್ರಾಮಗಳಲ್ಲಿ ನಿಮ್ಮ ಬೂತ್‌ಗಳಲ್ಲಿ ಹೆಚ್ಚಿನ ಮತಗಳು ಬರುವ ತರಹ ಕೆಲಸ ಮಾಡಬೇಕು. ಚುನಾವಣೆ ಇನ್ನೇನು 40 ದಿನಗಳು ಬಾಕಿ ಇದ್ದು, ಪ್ರತಿ ದಿನವೂ ಪ್ರತಿ ನಿಮಿಷವು ಸಮಯ ವ್ಯರ್ಥ ಮಾಡದೆ ಪಕ್ಷಕ್ಕಾಗಿ ದುಡಿದರೆ, ಭಾರತೀಯ ಜನತಾ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡುವ ಪಕ್ಷ. ಇದನ್ನ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ ಎಂದರು.
Related Articles
ನಾನು ಹತ್ತು ವರ್ಷಗಳ ಕಾಲ ಶಾಸಕನಾಗಿದ್ದ ವೇಳೆ ಕೋಲಾರ ಅಭಿವೃದ್ಧಿಯಾಗಿತ್ತು.ಐದು ವರ್ಷಗಳಿಂದ ಕೋಲಾರ 25 ವರ್ಷಗಳ ಹಿಂದಕ್ಕೆ ಹೋಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆ.ಶ್ರೀನಿವಾಸಗೌಡರು ನಯಾ ಪೈಸೆ ಕೂಡ ಅನುದಾನ ತಂದು ಅಭಿವೃದ್ಧಿ ಮಾಡಿಲ್ಲ ಎಂದರು.
ನಗರದಲ್ಲಿ ಜೆಡಿಎಸ್ -ಕಾಂಗ್ರೆಸ್ ತಲೆ ಎತ್ತಲ್ಲ: ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಉತ್ತಮ ಸಂಘಟನೆ ಮಾಡುತ್ತಿದ್ದು, ಹೈಕಮಾಂಡ್ ಯಾರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುತ್ತಾರೋ, ಅಂತವರಿಗೆ ಪಕ್ಷ ಟಿಕೆಟ್ ನೀಡುತ್ತದೆ ಎಂದರು. ಕೋಲಾರದಲ್ಲಿ ಜೆಡಿಎಸ್, ಕಾಂಗ್ರೆಸ್ ಯಾವುದೇ ಕಾರಣಕ್ಕೂ ತಲೆ ಎತ್ತುವುದಿಲ್ಲ. ಕಾಂಗ್ರೆಸ್ ಪಕ್ಷ ದಲಿತರನ್ನು ಹಾಳು ಮಾಡಿದೆ. ಜೆಡಿಎಸ್ ರೈತರ ಹೆಸರಿನಲ್ಲಿ ರೈತರನ್ನು ಹಾಳು ಮಾಡುತ್ತಿರುವ ಪಕ್ಷ. ಇಂತಹ ಪಕ್ಷದ ಮುಖಂಡರು ಮನೆಗೆ ಬಂದರೆ ತಕ್ಕ ಶಾಸ್ತಿ ಮಾಡಿ ಕಳಿಸಿ ಎಂದು ತಿಳಿಸಿದರು.
ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೂಪಶ್ರೀ ಮಂಜುನಾಥ್, ಅರುಣ್ ಪ್ರಸಾದ್, ತಾಲೂಕು ಅಧ್ಯಕ್ಷ ಸಿಡಿರಾಮಚಂದ್ರಗೌಡ, ನರಸಾಪುರ ಗ್ರಾ.ಪಂ ಅಧ್ಯಕ್ಷ ಶೈಲಜಾ, ಉಪಾಧ್ಯಕ್ಷ ಹಸೀನಾ ತಾಪಂ ಮಾಜಿ ಸದಸ್ಯಎನ್.ಕೆ. ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಎ.ನಾರಾಯಣಸ್ವಾಮಿ, ನರಸಾಪುರ ಗ್ರಾ.ಪಂ ಸದಸ್ಯರಾದ ಕೆಇಬಿ ಚಂದ್ರು, ಸುಮನ್, ರಾಜೇಂದ್ರ, ಮುನಿರಾಜು, ಕಾಜಿಕಲ್ಲಳ್ಳಿ ರಾಜಣ್ಣ, ಗೋಪಿ ಮುಖಂಡರಾದ ಹರೀಶ್, ಸತೀಶ್, ಯಲ್ಲೇಶ್, ಬೆಳ್ಳೂರು ಬಿ.ಜಿ.ಎನ್. ಮುರಳಿ, ದೊಡ್ಡವಲ್ಲ ಚನ್ನಕೇಶವ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು