Advertisement

ತಾಲೂಕಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ತೃಪ್ತಿ  ತಂದಿದೆ

06:02 PM Sep 11, 2022 | Team Udayavani |

ಬರಗೂರು: ಮೋದಿ ಪ್ರಧಾನಿ ಆದ ಮೇಲೆ 30 ಲಕ್ಷ ಭಾರತೀಯರು ಹೊಟ್ಟೆ ಪಾಡಿಗೆ ಅಮೆರಿಕಾಕ್ಕೆ ಹೋಗಿದ್ದಾರೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು.

Advertisement

ಶಿರಾ ತಾಲೂಕು ಬರಗೂರು ಗ್ರಾಮದಲ್ಲಿ ಶ್ರೀಕನಕ ಸೇವಾ ಸಮಿತಿ ಎಸ್ಸೆಸ್ಸೆಲ್ಸಿ, ಪಿಯು ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ 90 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳನ್ನು ಎದುರು ಹಾಕಿಕೊಂಡು, ಕೋಟಿಗಟ್ಟಲೇ ಅನುದಾನ ತಂದು ನೀರಾವರಿ ಕಾಮಗಾರಿ ಕೈಗೊಂಡು ಜನರಿಗೆ ಕುಡಿಯುವ ನೀರು ಒದಗಿಸಲು ಶತ ಪ್ರಯತ್ನ ಮಾಡಿದ್ದೇನೆ. ಆದರೂ, ಕೆಲವರು ಅಪಪ್ರಚಾರ ಮಾಡಿ, ಜನರನ್ನು ದಾರಿ ತಪ್ಪಿಸುವ ಕೆಲ ಮಾಡಿದ್ದರೂ, ನಾನು ತಾಲೂಕಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿದೆ ಎಂದು ತಿಳಿಸಿದರು.

ನನ್ನ ಅವಧಿಯಲ್ಲಿ ಕೈಗೊಂಡಿರುವ ಬ್ಯಾರೇಜ್‌, ಚೆಕ್‌ ಡ್ಯಾಂ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಯಿಂದ ತುಂಬಿದ್ದು, ಅದರ ಪ್ರಯೋಜನದಿಂದ ಅಂತರ್ಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಸಾವಿರಾರು ಬೋರ್ವೆಲ್‌ನಲ್ಲಿ ನೀರು ಬಂದು ರೈತರು ಸಂತೃಪ್ತಿ ಆಗಿರುವುದು ನನಗೆ ತೃಪ್ತಿ ತಂದಿದೆ ಎಂದು ವಿವರಿಸಿದರು. ಶ್ರೀಕನಕ ಸೇವಾ ಸಮಿತಿ ಅಧ್ಯಕ್ಷ ನಟರಾಜ್‌ ಬರಗೂರು ಮಾತನಾಡಿ, ಈ ಬಾರಿ ಮಾಜಿ ಸಚಿವ ಜಯಚಂದ್ರ ಅವರ ಮಾರ್ಗದರ್ಶನದಿಂದ ಈ ಬಾರಿ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ನಾಗಭೂಷಣ್‌ ಮಾತನಾಡಿದರು. ತುಮಕೂರು ರೇವಣ ಸಿದ್ದೇಶ್ವರ ಮಠದ ಶ್ರೀಬಿಂದುಶೇಖರ್‌ ಒಡೆಯರ್‌ ಸ್ವಾಮೀಜಿ, ತಡಕಲೂರು ಗ್ರಾಮದ ಆತ್ಮ ಪರಮಾತ್ಮ ಮಠದ ಶಿವಣ್ಣ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಕಾಂತರಾಜು, ಗಂಗಮ್ಮ, ಮಂಜು ನಾಥ್‌, ಲಕ್ಷ್ಮಣ, ರಾಘವೇಂದ್ರ, ಗೌರಮ್ಮ, ಕನಕ ಸೇವಾ ಸಮಿತಿ ಸಿದ್ದರಾಜು, ಬಿ.ಕೆ.ಭೀಮಣ್ಣ, ಶ್ರೀನಿವಾಸ್‌ ನಟರಾಜ್‌, ಎಲಪೇನಹಳ್ಳಿ ರಾಜು, ಓಂಕಾರ್‌, ಅಲೆಮಾರಿ ಸಂಘದ ಅಧ್ಯಕ್ಷ ದೇವ ರಾಜು, ಕಮ್ಮಾರ ಸಮಾಜದ ಮೂಡ್ಲಪ್ಪ, ಲತೀಫ್, ಭಾಷಾ ಸಾಬ್‌, ರಾಜ್ಯ ಕಾಂಗ್ರೆಸ್‌ ಎಸ್‌ಟಿ ಘಟಕದ ಉಪಾಧ್ಯಕ್ಷ ರಾಕೇಶ್‌ಬಾಬು, ಮಹಿಳಾ ತಾಲೂಕು ಘಟಕದ ಅಧ್ಯಕ್ಷೆ ಮಹದೇವಮ್ಮ, ತಾಪಂ ಮಾಜಿ ಉಪಾಧ್ಯಕ್ಷ ನರಸಿಂಹಯ್ಯ, ಯಜಮಾನ ಭೀಮಣ್ಣ, ಕೆ.ನರಸಪ್ಪ, ಎಚ್‌.ಎಲ್‌.ರಂಗನಾಥ್‌, ನರಸಪ್ಪ, ಗೌಡ ನಾರಾಯಣಪ್ಪ, ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಲಕ್ಕನಹಳ್ಳಿ ಕುಮಾರ್‌, ಪ್ರೇಮಕುಮಾರ್‌, ರಾಧಮ್ಮ, ಕೆಂಚಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಗೌಡಗೆರೆ ವಸಂತ್‌ಕುಮಾರ್‌, ನಿಡಗಟ್ಟೆ ಕುರಿಲಿಂಗಪ್ಪ, ನೇಕಾರ ಸಂಘದ ಮಾಜಿ ಅಧ್ಯಕ್ಷ ಬೀರಲಿಂಗಪ್ಪ, ದ್ವಾರನಕುಂಟೆ ನಾಗ ಭೂಷಣ್‌, ಎರವರಹಳ್ಳಿ ಲಿಂಗೇಶ್‌, ಗಂಗಮ್ಮ, ರೂಪಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next